ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗುಮ್ಮಘಟ್ಟ ಬಸವರಾಜ್ ಕಾರ್ಯದರ್ಶಿ

Rashmi Kasaragodu
Updated On : 4 Apr 2013, 12:15 pm

ಪಾವಗಡ: ತಾಲೂಕು ಕಾಂಗ್ರೆಸ್ ಕಾರ್ಯದರ್ಶಿಯಾಗಿ ಗುಮ್ಮಘಟ್ಟ ಬಸವರಾಜ್ ನೇಮಕಗೊಂಡಿರುವುದಾಗಿ ಕಾಂಗ್ರೆಸ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಪಕ್ಷದ ನೂತನ ಕಾರ್ಯದರ್ಶಿ ಗುಮ್ಮಘಟ್ಟ ಬಸವರಾಜ್ ಮಾತನಾಡಿ ಪಕ್ಷ ಸಂಘಟನೆ ಸೇರಿದಂತೆ ನನ್ನ ಸೇವೆಯನ್ನು ಪರಿಗಣಿಸಿದ ಶಾಸಕ ವೆಂಕಟರಮಣಪ್ಪ ಹಾಗೂ ತಾ.ಕಾಂಗ್ರೆಸ್ ಕಮಿಟಿಯವರು ಪಕ್ಷದ ತಾಲೂಕು ಕಾರ್ಯದರ್ಶಿಯನ್ನಾಗಿ ನನ್ನನ್ನು ನೇಮಿಸುವ ಮೂಲಕ ಜವಾಬ್ದಾರಿ ಸ್ಥಾನ ಕಲ್ಪಿಸಿದ್ದಾರೆ ಎಂದರು.  ಯುವಕರಿಗೆ ಆದ್ಯತೆ ಕಲ್ಪಿಸುವ ನಿಟ್ಟಿನಲ್ಲಿ ಗಡಿ ಗ್ರಾಮದ ವಾಸಿಯಾದ ನನ್ನನ್ನು ಗುರುತಿಸಿ ಪಕ್ಷದಲ್ಲಿ ಲಿಂಗಾಯತ ಸಮುದಾಯಕ್ಕೆ ಆದ್ಯತೆ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಪ್ರಾಶಸ್ತ್ಯ ನೀಡಿದ್ದು ಅತಿ ಚಿಕ್ಕ ವಯಸ್ಸಿನಲ್ಲಿ ಪಕ್ಷದಲ್ಲಿ ಮಹತ್ತರ ಹುದ್ದೆ ಕಲ್ಪಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದರು. ಯುವ ಮುಖಂಡ ಗುಮ್ಮಘಟ್ಟ ಈಶ್ವರ್ ಮಾತನಾಡಿ ಗುಮ್ಮಘಟ್ಟ ಬಸವರಾಜ್ ಅವರನ್ನು ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿರುವುದಕ್ಕೆ ಶಾಸಕ ವೆಂಕಟರಮಣಪ್ಪ, ಅಧ್ಯಕ್ಷ ಸುದೇಶ್‌ಬಾಬು ಮುಂತಾದವರಿಗೆ  ಕೃತಜ್ಞತೆ ಸಲ್ಲಿಸಿರುವುದಾಗಿ ತಿಳಿಸಿದರು.
ಮೋಟಾರ್ ಸೈಕಲ್‌ಗಳ ಬಹಿರಂಗ ಹರಾಜು
ತಿಪಟೂರು: ನಗರದ ಪೊಲೀಸ್ ಠಾಣೆಯಲ್ಲಿ ವಾರಸುದಾರರಿಲ್ಲದೆ ಇರುವ ಟಿ.ವಿ.ಎಸ್.ಮೊಪೆಡ್ ಮತ್ತು ಬೈಕ್‌ಗಳು ಸೇರಿದಂತೆ ಒಟ್ಟು 22 ಮೋಟಾರ್ ಸೈಕಲ್‌ಗಳನ್ನು ಬಹಿರಂಗ ಹರಾಜು ಮಾಡಲು ನ್ಯಾಯಾಲಯದಿಂದ ಅನುಮತಿ ಪಡೆದಿದ್ದು, ಸದರಿ ಮೋಟಾರ್ ಸೈಕಲ್‌ಗಳನ್ನು ಏ.9ರ ಮಂಗಳವಾರ ಬೆಳಗ್ಗೆ 10ಗಂಟೆಗೆ ನಗರ ಪೊಲೀಸ್ ಠಾಣೆಯ ಆವರಣದಲ್ಲಿ ಬಹಿರಂಗ ಹರಾಜು ನಡೆಯಲಿದೆ. ಆದ್ದರಿಂದ ಆಸಕ್ತಿ ಇರುವ ಸಾರ್ವಜನಿಕರು ಭಾಗವಹಿಸಹುದೆಂದು  ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.
ಚಿ.ನಾ.ಹಳ್ಳಿ: ಸ್ಥಿತಿ 'ನೆಟ್‌'ಗಿಲ್ಲ
ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಕಳೆದ ಎರಡು ದಿವಸಗಳಿಂದ ಇಂಟರ್‌ನೆಟ್ ಸಮಸ್ಯೆ ಉಲ್ಭಣಗೊಂಡಿದ್ದು ಬ್ಯಾಂಕ್ ಸೇರಿದಂತೆ ಎಲ್ಲಾ ಉದ್ಯಮಕ್ಕೂ ಪೆಟ್ಟು ಬಿದ್ದಿದೆ. ಈ ಸಂಬಂಧ ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲೆಯ ಎಲ್ಲಾ ಕಡೆ ಇಂಟರ್‌ನೆಟ್ ಸಮಸ್ಯೆ ಸರಿ ಹೋಗಿದ್ದರೂ ಚಿಕ್ಕನಾಯಕನಹಳ್ಳಿಯಲ್ಲಿ ಮಾತ್ರ ಸಮಸ್ಯೆ ಸುಧಾರಿಸಿಲ್ಲ. ಈ ಕೂಡಲೇ ಇಂಟರ್‌ನೆಟ್ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement