ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗ್ರಾಮದೊಳಗೆ ಆನೆಗಳ ಪ್ರವೇಶ, ಆತಂಕದಲ್ಲಿ ಗ್ರಾಮಸ್ಥರು

Rashmi Kasaragodu
Updated On : 4 Apr 2013, 12:16 pm

ತುರುವೇಕೆರೆ: ತಾಲೂಕಿನ ಗೊಟ್ಟೀಕೆರೆ ಗ್ರಾಮದ ಬರಡು ಕೆರೆಯೊಳಗೆ ಬಂದು ನಿಂತಿದ್ದ 3 ಆನೆಗಳು ಬುಧವಾರ ಬೆಳಗ್ಗೆ  ಮಾವಿನಕೆರೆ ಗ್ರಾಮದ ಕೆರೆಗೆ ಬಂದಿದ್ದವು. ಸಾಯಂಕಾಲದ ವರೆಗೂ ಕೆರೆಯೊಳಗೇ ಕಾಲ ಕಳೆದಿದ್ದ ಆನೆಗಳು ಕತ್ತಲಾಗುತ್ತಿದ್ದಂತೆ ಗ್ರಾಮದ ಸಮೀಪವೇ ಇರುವ ಕರಡಿಗೆರೆ ಗ್ರಾಮದೊಳಕ್ಕೆ ಬಂದಿವೆ. ಗ್ರಾಮದ ಬೀದಿಗಳಲ್ಲಿ ಸಂಚಾರ ಮಾಡುತ್ತಿರುವ ಆನೆಗಳು ಘೀಳಿಡುತ್ತಾ ಸಾಗುತ್ತಿವೆ.
 ಗ್ರಾಮದ ಜನರು ಭಯಭೀತರಾಗಿದ್ದಾರೆ. ಜನರು ದಾರಿಯುದ್ದಕ್ಕೂ ಬೆಂಕಿ ಹಾಕಿ ಪಟಾಕಿ ಸಿಡಿಸಿ ಆನೆಗಳನ್ನು ಬೇರೆಡೆ ಓಡಿಸುವ ಸಾಹಸ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥ ಗಂಗಾಧರ ಗೌಡ ಪತ್ರಿಕೆಗೆ ತಿಳಿಸಿದರು.
 ಬಾಳೆ ತೋಟಕ್ಕೆ ಹಾನಿ: ತಾಲೂಕಿನ ಗೊಟ್ಟೀಕೆರೆಯ ಬರಡು ಕೆರೆಯಲ್ಲಿ ಬೀಡು ಬಿಟ್ಟಿದ್ದ 3 ಆನೆಗಳು ಬೇರೆಡೆ ಸಾಗುವಾಗ ಉಗೇನಹಳ್ಳಿಯ ವಾಸಿ ಕೆಂಪೇಗೌಡ ಎಂಬುವವರ ಬಾಳೆಯ ತೋಟಕ್ಕೆ ನುಗ್ಗಿ ಸುಮಾರು ಬಾಳೆ ಫಸಲನ್ನು ಹಾಳು ಮಾಡಿದೆ. ಸುಮಾರು 50 ಸಾವಿರ ರು.ಗಳಷ್ಟು ಹಾನಿ ಮಾಡಿದೆ ಎಂದು ಬಾಳೆ ತೋಟದ ಮಾಲೀಕ ಕೆಂಪೇಗೌಡ ತಿಳಿಸಿದ್ದಾರೆ. ಅರಣ್ಯ ಇಲಾಖೆ ಸೂಕ್ತ ಪರಿಹಾರವನ್ನೂ ಸಹ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement