ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಿಲ್ಲೆಯಲ್ಲಿ 19,45,982 ಮತದಾರರು

Rashmi Kasaragodu
Updated On : 4 Apr 2013, 12:16 pm

ಕ.ಪ್ರ.ವಾರ್ತೆ, ತುಮಕೂರು, ಏ.3
ಜನವರಿ 16 ಕ್ಕೆ ಕೊನೆಗೊಂಡಂತೆ ತುಮಕೂರು ಜಿಲ್ಲೆಯಲ್ಲಿ ಒಟ್ಟು 19 ಲಕ್ಷ 45 ಸಾವಿರದ 982 ಮತದಾರರು ಇದ್ದಾರೆ.
ಇವರಲ್ಲಿ 9 ಲಕ್ಷ 87 ಸಾವಿರದ 439 ಪುರುಷ ಮತದಾರರಿದ್ದರೆ, 9 ಲಕ್ಷ 58 ಸಾವಿರದ 543 ಮಹಿಳಾ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಮಾಹಿತಿ ನೀಡಿದರು. ಚಿಕ್ಕನಾಯಕನಹಳ್ಳಿಯಲ್ಲಿ 1 ಲಕ್ಷ 92 ಸಾವಿರದ 8 ಮತದಾರರಿದ್ದಾರೆ. ಇವರಲ್ಲಿ ಪುರುಷರು 97 ಸಾವಿರದ 121, ಮಹಿಳೆಯರು 94 ಸಾವಿರದ 887 ಮತದಾರರು ಇದ್ದಾರೆ.
ತಿಪಟೂರಿನಲ್ಲಿ 1 ಲಕ್ಷ 65 ಸಾವಿರದ 48 ಮತದಾರರಿದ್ದಾರೆ. ಇವರಲ್ಲಿ 82 ಸಾವಿರದ 58 ಪುರುಷ ಮತ್ತು 82 ಸಾವಿರದ 990 ಮಹಿಳಾ ಮತದಾರರಿದ್ದಾರೆ. ತುರುವೇಕೆರೆಯಲ್ಲಿ 1ಲಕ್ಷ 70 ಸಾವಿರದ 640 ಮತದಾರರಿದ್ದಾರೆ. ಇವರಲ್ಲಿ 85484 ಪುರುಷ ಹಾಗೂ 85156 ಮಹಿಳಾ ಮತದಾರರು. ಕುಣಿಗಲ್‌ನಲ್ಲಿ 1 ಲಕ್ಷ 65 ಸಾವಿರದ 177 ಮತದಾರರಿದ್ದಾರೆ. ಇವರಲ್ಲಿ 83 ಸಾವಿರದ 524 ಪುರುಷ ಹಾಗೂ 81 653 ಮಹಿಳಾ ಮತದಾರರು.
ತುಮಕೂರು ನಗರದಲ್ಲಿ 1ಲಕ್ಷ 91 ಸಾವಿರದ 236 ಮತದಾರರಿದ್ದಾರೆ. ಇವರಲ್ಲಿ 96571 ಹಾಗೂ 94665 ಮಹಿಳಾ ಮತದಾರರಿದ್ದಾರೆ. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ 66 ಸಾವಿರದ 745 ಮತದಾರರಿದ್ದು ಇವರಲ್ಲಿ 85 ಸಾವಿರದ 22 ಪುರುಷ ಹಾಗೂ 81723 ಮಹಿಳಾ ಮತದಾರರಿದ್ದಾರೆ. ಕೊರಟಗೆರೆಯಲ್ಲಿ 1 ಲಕ್ಷ 76 ಸಾವಿರದ 286 ಮತದಾರರಿದ್ದು ಇವರಲ್ಲಿ 90388 ಪುರುಷ ಹಾಗೂ 85898 ಮಹಿಳಾ ಮತದಾರರಿದ್ದಾರೆ.
ಗುಬ್ಬಿಯಲ್ಲಿ: ಗುಬ್ಬಿಯಲ್ಲಿ 1 ಲಕ್ಷ 64 ಸಾವಿರದ 277 ಮತದಾರರಿದ್ದು ಇವರಲ್ಲಿ 83592 ಪುರುಷ ಹಾಗೂ 80685 ಮಹಿಳಾ ಮತದಾರರಿದ್ದಾರೆ. ಶಿರಾದಲ್ಲಿ 1 ಲಕ್ಷ 95 ಸಾವಿರದ 344 ಮತದಾರರಿದ್ದು ಇವರಲ್ಲಿ 99860 ಪುರುಷ ಹಾಗೂ 95484 ಮಹಿಳಾ ಮತದಾರರಿದ್ದಾರೆ. ಪಾವಗಡದಲ್ಲಿ 1 ಲಕ್ಷ 82 ಸಾವಿರದ 897 ಮತದಾರರಿದ್ದು ಇವರಲ್ಲಿ 93517 ಪುರುಷ ಹಾಗೂ 89380 ಮಹಿಳಾ ಮತದಾರರಿದ್ದಾರೆ. ಮಧುಗಿರಿಯಲ್ಲಿ 1 ಲಕ್ಷ 76 ಸಾವಿರದ 324 ಮತದಾರರಿದ್ದು ಇವರಲ್ಲಿ 90 ಸಾವಿರದ 302 ಪುರುಷ ಹಾಗೂ 86 ಸಾವಿರದ 22 ಮಹಿಳಾ ಮತದಾರರಿದ್ದಾರೆ.
ಹೊಸದಾಗಿ ಸೇರ್ಪಡೆ: ತುಮಕೂರು ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ 37 ಸಾವಿರದ 200 ಪುರುಷ ಹಾಗೂ 38 ಸಾವಿರದ 434 ಮಹಿಳಾ ಮತದಾರರನ್ನು ಹೊಸದಾಗಿ ಸೇರಿಸಲಾಗಿದೆ. ಹಾಗೆಯೇ 8 ಸಾವಿರದ 147  ಪುರುಷ ಹಾಗೂ 7 ಸಾವಿರದ 351 ಮಹಿಳಾ ಮತದಾರರನ್ನು ಡಿಲಿಟ್ ಮಾಡಲಾಗಿದೆ ಎಂದು ವಿವರಿಸಿದರು.
ಚೆಕ್ ಪೋಸ್ಟ್ ನಿರ್ಮಾಣ: ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ 50 ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ.
ಸಿಇಓ ನೇಮಕ: ತುಮಕೂರು ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಕ್ಕೆ ಜಿ.ಪಂ. ಸಿಇಓ ಗೋವಿಂದರಾಜು ಅವರನ್ನು ಜಿಲ್ಲಾ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಹಾಗೆಯೇ ಚಿಕ್ಕನಾಯಕನಹಳ್ಳಿಗೆ ತುಮಕೂರು ಎಪಿಎಂಸಿ ಉಪನಿರ್ದೇಶಕ ದೊರೆಸ್ವಾಮಿ, ತಿಪಟೂರಿಗೆ ತಿಪಟೂರು ನಗರಸಭೆ ಆಯುಕ್ತ ಚಂದ್ರಶೇಖರ್,  ತುರುವೇಕೆರೆಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಮುಕುಂದ ಕೃಷ್ಣೇಗೌಡ, ಕುಣಿಗಲ್‌ಗೆ ತುಮಕೂರು ಖಾದಿ ಗ್ರಾಮೋದ್ಯೋಗ ಇಲಾಖೆ  ಜಿಲ್ಲಾ ಅಧಿಕಾರಿ ಹೆಚ್.ಎಸ್. ಹನುಮೇಗೌಡ, ತುಮಕೂರು ನಗರಕ್ಕೆ ತುಮಕೂರು ನಗರಸಭೆ ಆಯುಕ್ತ ಬಿ.ಎಸ್. ನಾರಾಯಣಪ್ಪ, ತುಮಕೂರು ಗ್ರಾಮಾಂತರಕ್ಕೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ. ಸಿದ್ದರಾಜು, ಗುಬ್ಬಿಗೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ.ಎನ್. ಪ್ರಸಾದ್, ಶಿರಾಕ್ಕೆ ಶಿರಾ ನಗರಸಭೆ ಆಯುಕ್ತ ರಂಗಸ್ವಾಮಿ, ಪಾವಗಡಕ್ಕೆ ಕಾರ್ಖಾನೆ ಮತ್ತು ಬಾಯ್ಲರ್ಸ್‌ನ ಸಹಾಯಕ ನಿರ್ದೇಶಕ ನರೇಂದ್ರಬಾಬು ಹಾಗೂ ಮಧುಗಿರಿಗೆ ಹ್ಯಾಂಡ್‌ಲೂಂ ಮತ್ತು ಟೆಕ್ಸ್‌ಟೈಲ್ಸ್ ಉಪನಿರ್ದೇಶಕ ಗಂಗಯ್ಯರನ್ನು ನೇಮಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement