ತಿಪಟೂರಿಗೆ ನಟ ರವಿಚೇತನ ಭೇಟಿ (ಸುದ್ದಿ ಸಂಕ್ಷೇಪ)
ತಿಪಟೂರು: ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ನಡೆದ ಶ್ರೀ ವ್ಯಾಸರಾಜ ಹಾಗೂ ವಾದಿರಾಜ ಗುರುಗಳ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಸತ್ಯಾನಂದ ಚಿತ್ರದ ನಾಯಕ ನಟ ರವಿಚೇತನ್, ಚಿತ್ರ ನಿರ್ದೇಶಕ ಬಂಗಾರು ಹಾಗೂ ಕಿರುತೆರೆ ನಟ ದಯಾನಂದ ಸಾಗರ್, ಧನಂಜಯ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ದೇವಾಲಯದ ಧರ್ಮದರ್ಶಿ ಕೆ.ಎನ್. ಗುರುರಾಜ್ ಮತ್ತಿತರರಿದ್ದರು.
ಪಾಂಡುರಂಗಪ್ಪ ಅಧ್ಯಕ್ಷರಾಗಿ ಆಯ್ಕೆ
ಶಿರಾ: ತಾಲೂಕು ಅಖಿಲ ಕರ್ನಾಟಕ ಡಾ.ಅಂಬೇಡ್ಕರ್ ಮಹಾ ಸಭಾ ಅಲ್ಪಸಂಖ್ಯಾತ ಹಿಂದುಳಿದ ದಲಿತ ಸಮಿತಿ ಶಿರಾ ಶಾಖೆಯ ಅಧ್ಯಕ್ಷರಾಗಿ ಪಾಂಡುರಂಗಪ್ಪ ಆಯ್ಕೆಯಾಗಿದ್ದಾರೆ. ಪಟ್ಟಣದ ಬೆಸ್ಕಾಂ ಕಚೇರಿ ಆವರಣದ ಶ್ರೀ ರಾಮ ದೇವಸ್ಥಾನ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸಂಘವನ್ನು ಮಾಜಿ ಸಚಿವ ಬಿ.ಸತ್ಯನಾರಾಯಣ ಉದ್ಘಾಟಿಸಿದರು. ಮಾಜಿ ಜಿ.ಪಂ. ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಕಲ್ಕೆರೆ ರವಿಕುಮಾರ್, ಶಿವಣ್ಣ, ರಾಮಸ್ವಾಮಿ, ಜಿಲ್ಲಾಧ್ಯಕ್ಷ ಹೆಚ್.ಸಿದ್ದಗಂಗಪ್ಪ, ಹೊನ್ನೇಶ್, ನಗರಸಭೆ ಸದಸ್ಯ ಆರ್.ಉಗ್ರೇಶ್, ಗೌರವಾಧ್ಯಕ್ಷ ಎಚ್.ಎಚ್.ಲಕ್ಷ್ಮೀನರಸಿಂಹಯ್ಯ ಹಾಜರಿದ್ದರು.
ಇದೇ ಸಂದರ್ಭದಲ್ಲಿ ತಾಲೂಕು ಘಟಕವನ್ನು ಆಯ್ಕೆ ಮಾಡಿ ಸಂಘದ ಉಪಾಧ್ಯಕ್ಷರಾಗಿ ವಿರೂಪಾಕ್ಷಪ್ಪ, ಮಹಮದ್ಗೌಸ್, ಖಜಾಂಚಿಯಾಗಿ ಗುರುಸ್ವಾಮಿ, ಭೂತೇಶ್, ಶಿವು ಗೋವಿಂದು ಮತ್ತಿತರರು ಹಾಜರಿದ್ದರು.
ನಿವೃತ್ತ ನೌಕರರ ಸಂಘದ ಸದಸ್ಯರ ಸಭೆ
ಗುಬ್ಬಿ: ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಸರ್ವಸದಸ್ಯರ ಸಭೆಯನ್ನು ಏಪ್ರಿಲ್ 30 ರಂದು ಪಟ್ಟಣದ ಶಿವರಾತ್ರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಘದ ಅಧ್ಯಕ್ಷ ಎಂ.ರಾಮಯ್ಯ ಅವರ ನೇತೃತ್ವದಲ್ಲಿ ನಡೆಯುವ ಸಭೆಗೆ ತರಬಯಸುವ ವಿಷಯಗಳೇನಾದರೂ ಇದ್ದಲ್ಲಿ ಸದಸ್ಯರು ಏಪ್ರಿಲ್ 15 ರೊಳಗೆ ಲಿಖಿತ ಮುಖೇನ ಕಚೇರಿಗೆ ಸಲ್ಲಿಸಲು ಸಂಘದ ಕಾರ್ಯದರ್ಶಿ ಎನ್.ಆರ್.ರೇಣುಕಾಪ್ರಸಾದ್ ತಿಳಿಸಿದ್ದಾರೆ.