ಸಿಮ್ನ ಸಹಾಯದಿಂದ ಅಪರಿಚಿತ ಶವದ ಗುರುತು
ಕ.ಪ್ರ. ವಾರ್ತೆ ಕುಣಿಗಲ್ ಏ.4
ಕಳೆದ ಸೋಮವಾರ ಪಟ್ಟಣದ ಕಸ ವಿಸರ್ಜಿಸಿರುವ ತಾಣವಾದ ಗವಿಮಠ ಕರೆಕಲ್ಲು ಗುಡ್ಡದ ಬಳಿ ದೊರೆತ ಅಪರಿಚಿತ ಶವದ ಗುರುತು, ರೈತರೊಬ್ಬರಿಗೆ ಸಿಕ್ಕಿದ ಸಿಮ್ನ ಸಹಾಯದಿಂದ ಪತ್ತೆಯಾಗದೆ.
ಮೃತನನ್ನು ನಾಗವಲ್ಲಿ ಗ್ರಾಮದ ಮುಜಾಹಿದ್ (25) ಎಂದು ಗುರುತಿಸಲಾಗಿದ್ದು, ಈತ ಬೆಂಗಳೂರಿನ ಲಾರಿ ಮಾಲೀಕ ಶಬ್ಬೀರ್ ಎಂಬುವವರ ಬಳಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ.
ಮದ್ದೂರು ಇತರೆಡೆಯಿಂದ ಎಳನೀರು ಸಂಗ್ರಹಿಸಿ ಮುಂಬೈ ಸಾಗಿಸುವ ವೃತ್ತಿಯಲ್ಲಿದ್ದ, ಕಳೆದ ಸೋಮವಾರ ಎಳನೀರು ತುಂಬಿಕೊಂಡು ಹುಲಿಯೂರುದುರ್ಗ ಮಾರ್ಗವಾಗಿ ಮುಂಬೈಗೆ ತೆರಳಲು ಬರುವ ಮಾರ್ಗದಲ್ಲಿ ದುಷ್ಕರ್ಮಿಗಳು, ಮುಜಾಹಿದ್ನನ್ನು ಕೊಲೆ ಮಾಡಿ, ಅತನ ಬಳಿ ಇದ್ದ ಮೊಬೈಲ್ ಸಿಮ್ ಬಿಸಾಕಿ, ಲಾರಿ ಅಪಹರಿಸಿದ್ದಲ್ಲದೆ, ಶವವನ್ನು ಗವಿಮಠ ಕರೆಕಲ್ಲುಗುಡ್ಡದ ಬಳಿ ಎಸೆದು ಹೋಗಿದ್ದರು.
ಈ ಮಧ್ಯೆ ಲಾರಿ ಮಾಲೀಕ, ಚಾಲಕನಿಂದ ಯಾವುದೇ ಪ್ರತಿಕ್ರಿಯೆ ಬಾರದೆ, ಲಾರಿ ಕಣ್ಮರೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಹುಲಿಯೂರುದುರ್ಗದ ಬಳಿ ಆಕಸ್ಮಿಕವಾಗಿ ಸಿಕ್ಕ ಸಿಮ್ ಅನ್ನು ರೈತನೊಬ್ಬ ತನ್ನ ಮೊಬೈಲ್ಗೆ ಹಾಕಿಕೊಂಡಾಗ, ಮಾಲೀಕ ಸಂಪರ್ಕಿಸಿ ತನಗೆ ಸಿಕ್ಕಿರುವ ಬಗ್ಗೆ ರೈತ ವಿವರಿಸಿದ ಮೇರೆಗೆ, ಲಾರಿ ಮಾಲೀಕ, ಹುಲಿಯೂರುದುರ್ಗಕ್ಕೆ ಆಗಮಿಸಿದ.
ವಿಚಾರಿಸಿದಾಗ, ಅಪರಿಚಿತ ಶವದ ಗುರುತು ಪತ್ತೆಯಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.