ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಇಂದು ತುರುವೇಕೆರೆ ಹಿರಣ್ಣಯ್ಯ ರಂಗಮಂದಿರದಲ್ಲಿ ಶ್ರೀನಿವಾಸ ಕಲ್ಯಾಣ

Rashmi Kasaragodu
Updated On : 6 Apr 2013, 12:51 pm

ತುರುವೇಕೆರೆ: ಇಲ್ಲಿನ ಹಿರಣ್ಣಯ್ಯ ರಂಗಮಂದಿರದ ಆವರಣದಲ್ಲಿ ಚಿತ್ರ ನಿರ್ಮಾಪಕ ಕೆ.ಮಂಜು ಪ್ರಾಯೋಜಿಸುತ್ತಿರುವ ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಾರ್ಯಕ್ರಮಕ್ಕೆ ಅದ್ಧೂರಿ ತಯಾರಿ ನಡೆದಿದೆ. ಶನಿವಾರ ಮಧ್ಯಾಹ್ನ 3 ಗಂಟೆಯಿಂದ ಪಟ್ಟಣದ ಬೇಟೆರಾಯಸ್ವಾಮಿ ದೇವಾಲಯದ ಮುಂಭಾಗದಿಂದ ಶ್ರೀವಾರಿ ಟ್ರಸ್ಟ್ ವತಿಯಿಂದ ತರಲಾಗಿರುವ ವಿವಿಧ ದೇವರ  ಉತ್ಸವವನ್ನು ಪಟ್ಟಣದ ಪ್ರಮುಖ ರಾಜ ಬೀದಿಗಳಲ್ಲಿ ವಿವಿಧ ಜಾನಪದ ಕಲಾ ಮೇಳಗಳೊಂದಿಗೆ ಮೆರವಣಿಗೆ ಮಾಡಲಾಗುವುದು. ಮಹಿಳಾ ಭಜನಾಮಂಡಲಿ ವತಿಯಿಂದ ತಿರುಪತಿ ವೆಂಕಟೇಶ ವೈಭವದ ಗೀತೆ ಹಾಡುತ್ತಾ ಕುಣಿಯುತ್ತಾ ಮೆರವಣಿಗೆ ಮಾಡಲಾಗುವುದು. ಸುಮಾರು 5 ಗಂಟೆಯಿಂದ ಹಿರಣ್ಣಯ್ಯ ರಂಗಮಂದಿರದಲ್ಲಿ ನಿರ್ಮಿಸಿರುವ ಬೃಹತ್ ವೇದಿಕೆಯ ಮೇಲೆ ಶ್ರೀನಿವಾಸ ಕಲ್ಯಾಣ ಮಹೋತ್ಸವ ನೆಡಸಲಾಗುವುದು ಎಂದು ವ್ಯವಸ್ಥಾಪಕ ಕೆ.ಮಂಜು ತಿಳಿಸಿದ್ದಾರೆ. ಸುಮಾರು 20 ಸಾವಿರ ಮಂದಿ ಕಲ್ಯಾಣ ಮಹೋತ್ಸವವನ್ನು ವೀಕ್ಷಿಸಲು ಆಗಮಿಸಲಿದ್ದಾರೆ. ಎಲ್ಲರಿಗೂ ಸಾವಕಾಶವಾಗಿ ವೀಕ್ಷಣೆ ಮಾಡುವ ಸಲುವಾಗಿ ಬೃಹತ್ ಪರದೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 25 ಸಾವಿರ ಲಾಡುಗಳನ್ನು ಪ್ರಸಾದವಾಗಿ ತರಿಸಲಾಗಿದೆ.  ಕಾರ್ಯಕ್ರಮಕ್ಕೆ ಚಿತ್ರ ನಟ ಪುನೀತ್‌ರಾಜ್‌ಕುಮಾರ್ ದಂಪತಿ ಆಗಮಿಸುವರು ಎಂದು ಕೆ.ಮಂಜು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement