ಬೆಂಕಿ ಆಕಸ್ಮಿಕ: ರು. 75 ಸಾವಿರ ನಷ್ಟ
ಕ.ಪ್ರ. ವಾರ್ತೆ ಗುಬ್ಬಿ ಏ.5
ಗುಬ್ಬಿ ತಾಲೂಕಿನ ಕಿಡದಕುಪ್ಪೆ ಗ್ರಾಮದಲ್ಲಿ ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಸುಮಾರು ರು. 75 ಸಾವಿರ ನಷ್ಟ ಸಂಭವಿಸಿದೆ.
ಗುಬ್ಬಿ ತಾಲೂಕಿನ ಕಿಡದಕುಪ್ಪೆ ಗ್ರಾಮದಲ್ಲಿ ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಕೊಟ್ಟಿಗೆಯಲ್ಲಿದ್ದ ಒಂದು ಹಸು ಬೆಂಕಿ ಗಾ ಹುತಿಗಿರುವ ಘಟನೆ ನಡೆದಿದೆ.
ಗುಬ್ಬಿ ತಾಲೂಕಿನ ಕಿಡದಕುಪ್ಪೆ ಗ್ರಾಮದ ವಾಸಿ ಮುಕ್ಕಣ್ಣ ಎಂಬುವರ ಕೊಟ್ಟಿಗೆಯಲ್ಲಿ ಈ ಘಟನೆ ಸಂಭವಿಸಿದ್ದು, ಸುಮಾರು 75 ಸಾವಿರ ರು. ನಷ್ಟ ಸಂಭವಿಸಿದೆ. ಕೊಟ್ಟಿಗೆಯಲ್ಲಿ ಕಟ್ಟದ್ದ ಹಸು, ಸೈಕಲ್ ಹಾಗೂ ಹುಲ್ಲು ಬೆಂಕಿ ಗಾಹುತಿಯಾಗಿವೆ.ಎರಡು ಮೇಕೆ ಹಾಗೂ 1 ಕರು ಬೆಂಕಿ ಜ್ವಾಲೆಯಿಂದ ತಪ್ಪಿಸಿಕೊಂಡು ಓಡಿ ಹೋಗಿವೆ. ಸುಮಾರು 4 ಸಾವಿರ ಕೊಬ್ಬರಿ ಸಹ ಸುಟ್ಟು ಭಸ್ಮವಾಗಿದೆ.
ಈ ಘಟನೆ ನಡೆದ ಸ್ಥಳಕ್ಕೆ ಶಾಸಕ ಎಸ್.ಆರ್.ಶ್ರೀನಿವಾಸ್ ಹಾಗೂ ಮತ್ತಿತರೆ ಮುಖಂಡರು ಹಾಗೂ ಆಧಿಕಾರಿಗಳು ಭೇಟಿ ನೀಡಿ ಪರಿಶೀಸಿದರು. ಈ ಸಂಬಂಧ ಗುಬ್ಬಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.