ರೈತರ ದಿವಾಳಿತನಕ್ಕೆ ಆರ್ಥಿಕ ನೀತಿಯೇ ಕಾರಣ
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಜೆ.ಟಿ.ರಾಮಸ್ವಾಮಿ ಮಾತನಾಡಿ, ರೈತರ ಹೆಸರಿನಲ್ಲಿ ದೇಶ ಲೂಟಿ ಮಾಡಲಾಗುತ್ತಿದೆ.
ಸಾಲ ಮನ್ನಾ ಕೇವಲ ಹೆಸರಿಗೆ ಮಾತ್ರ. ಆದರೆ, ಅದರ ನಿಜವಾದ ಫಲಾನುಭವಿಗಳು ಎಂದರೆ ಹಲವಾರು ಉದ್ಯಮ ನಡೆಸುತ್ತಿರುವ ಕಾರ್ಖಾನೆಯ ಮಾಲೀಕರು ಎಂದರು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ರೈತರ ಶೋಷಣೆ ನಡೆಯುತ್ತಲೇ ಇದೆ.
ಎಲ್ಲಿಯವರೆಗೆ ದೇಶದಲ್ಲಿ ರೈತರಿಗೆ ಸೂಕ್ತ ಗೌರವ ಸ್ಥಾನ ಮಾನ ದೊರೆಯುವುದಿಲ್ಲವೋ ಅಲ್ಲಿಯ ತನಕ ದೇಶದ ಉದ್ಧಾರವಾಗದು ಎಂದರು. ಮರಳು ದಂಧೆಯಿಂದಾಗಿ ಅಂತರ್ಜಲ ಕುಸಿದಿದೆ. ನೀರಿನ ಸೆಳೆತ ಹಿಡಿದಿಟ್ಟುಕೊಳ್ಳುತ್ತಿದ್ದ ಕಡೆ ಇಂದು ಬರಡು ನಾಡಾಗಿದೆ. ಸ್ವಾರ್ಥಕ್ಕಾಗಿ ದೇಶವನ್ನೇ ಅಡವಿಡುವ ಸ್ಥಿತಿ ಇದೆ ಎಂದು ರಾಮಸ್ವಾಮಿ ವಿಷಾದಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಮೇಲನಹಳ್ಳಿ ಶ್ರೀನಿವಾಸ್‌ಗೌಡ, ರೈತ ಸಂಘದ ಉಪಾಧ್ಯಕ್ಷ ರಾಮು, ಗುಬ್ಬಿ ಪ್ರಧಾನ ಕಾರ್ಯದರ್ಶಿ ವೆಂಕಟೇಗೌಡ, ದೇವೀಹಳ್ಳಿ ರಾಮಕೃಷ್ಣಯ್ಯ, ಗಾಂಧಿ ಗ್ರಾಮದ ಎಸ್.ಚಂದ್ರು, ದಬ್ಬೇಘಟ್ಟದ ರಮೇಶ್, ಹಬುಕನಹಳ್ಳಿ ಹೆಚ್.ಬಿ.ಬಸವರಾಜು, ಹೊಡಿಕೇಘಟ್ಟದ ಹೆಚ್.ಬಿ.ರಾಮೇಗೌಡ, ಅಪ್ಪಾಜಿಗೌಡ, ಹಿಂಡುಮಾರನಹಳ್ಳಿ ಹೆಚ್.ಜಿ.ರಮೇಶ್ ಮೊದಲಾದವರು ಭಾಗವಹಿಸಿದ್ದರು.