ಹಣ ದುರುಪಯೋಗ: ವ್ಯಕ್ತಿಗೆ ಜೈಲು ಶಿಕ್ಷೆ
ಕ.ಪ್ರ. ವಾರ್ತೆ ಚಿಕ್ಕನಾಯಕನಹಳ್ಳಿ ಏ.5
ಯಳನಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಣ ಮತ್ತು ದಾಸ್ತಾನು ದುರುಪಯೋಗ ಮಾಡಿದ ದೂರಿನನ್ವಯ ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯದ ನ್ಯಾ. ಎನ್.ವೀಣಾ ಅವರು ಆರೋಪಿಗೆ ಜೈಲುಶಿಕ್ಷೆ ಮತ್ತು ದಂಡ ಎರಡನ್ನು ಜಾರಿಗೊಳಿಸಿ ತೀರ್ಪುನೀಡಿದ್ದಾರೆ.
ಪ್ರಕರಣದ ಹಿನ್ನೆಲೆ: 2002ರಲ್ಲಿ ಹುಳಿಯಾರು ಪೊಲೀಸ್ ಠಾಣೆಯಲ್ಲಿ ದಾಖಲಾದ ಯಳನಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆಯೆನ್ನಲಾದ ಹಣ ಮತ್ತು ದಾಸ್ತಾನು ಬಾಬ್ತು ರು. 1,39,779 ಹಣ ದುರುಪಯೋಗ ಪಡಿಸಿಕೊಂಡ ದೂರಿನ ಮೇರೆಗೆ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ಅಪರ ಸಿವಿಲ್ ನ್ಯಾಯಧೀಶರಾದ ಎನ್.ವೀಣಾ ಸಾಕ್ಷಾಧಾರಗಳು ಸ್ಥಿರಪಟ್ಟ ಹಿನ್ನೆಲೆಯಲ್ಲಿ ಆರೋಪಿ ಸಹಕಾರ ಸಂಘದ ಕಾರ್ಯದರ್ಶಿ ಎಂ.ಎನ್.ಸೋಮಶೇಖರ್ಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರೂಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.