ಅವನಿನ್ನೂ ಬಚ್ಚಾ
ತುಮಕೂರು: ಸಂಸದರ ಪುತ್ರ ಬಚ್ಚಾ. 20 ವರ್ಷಗಳ ಹಿಂದೆ ಹೇಗಿದ್ದ ಎಂಬುದನ್ನು ಒಮ್ಮೆ ನೋಡಿಕೊಳ್ಳಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ತುಮಕೂರು ನಗರ ಕೆಜೆಪಿ ಅಭ್ಯರ್ಥಿ ಜ್ಯೋತಿಗಣೇಶ್ ಹೆಸರೆತ್ತದೆ ಲೇವಡಿ ಮಾಡಿದರು.
ದುರಂಹಕಾರಿ ಶಾಸಕ ಸೊಗಡು ಶಿವಣ್ಣನವರನ್ನು ಊರಿಂದ ಆಚೆ ಹಾಕಬೇಕು ಎಂಬ ಜ್ಯೋತಿ ಗಣೇಶ್ ಹೇಳಿಕೆಗೆ ಸಚಿವರು ಮೇಲಿನಂತೆ ಉತ್ತರಿಸಿದರು. ತಾವು ಆತನ ವಿರುದ್ಧ ಏನನ್ನೂ ಮಾತನಾಡುವುದಿಲ್ಲ. ಸಂಸದರು ತಾವು ಟೀಕಿಸುವ ಬದಲು, ತಮ್ಮ ಮಗನ ಮೂಲಕ ತಮ್ಮನ್ನು ಟೀಕಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.