ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೊನೆ ಚುನಾವಣೆ ಎನ್ನುವವರು ಹೇಡಿಗಳು

Rashmi Kasaragodu
Updated On : 7 Apr 2013, 11:41 am

ಕ.ಪ್ರ.ವಾರ್ತೆ   ಶಿರಾ   ಏ.7
ಇದು ನನ್ನ ಕೊನೆ ಚುನಾವಣೆ, ನನಗೆ ಓಟು ಕೊಡಿ ಎಂದು ಹೇಳುವುದು ರಾಜಕೀಯ ನಾಯಕರ ನಡೆಯಲ್ಲ ಎಂದು ಶಾಸಕ ಟಿ.ಬಿ.ಜಯಚಂದ್ರ ಅವರು ಮಾಜಿ ಸಚಿವ ಬಿ.ಸತ್ಯನಾರಾಯಣ ಅವರಿಗೆ ಪರೋಕ್ಷವಾಗಿ ಛೇಡಿಸಿದರು.
ಅವರು ತಾಲೂಕಿನ ಭೂತಪ್ಪನ ಗುಡಿ ಹತ್ತಿರ ಗೌಡಗೆರೆ ಹೋಬಳಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತ, ಅವರು ಪದೇ ಪದೇ ನನ್ನ ಕೊನೆಯ ಚುನಾವಣೆ ಎನ್ನುವವರನ್ನು ರಣಹೇಡಿಗಳು ಎನ್ನುತ್ತಾರೆ ಎಂದರು.
ನಾನು ರಾಜಕೀಯ ನಿವೃತ್ತಿಯಂತೂ ಆಗುವುದಿಲ್ಲ. ಈಗಾಗಲೇ ನನ್ನನ್ನು ರಾಷ್ಟ್ರ ರಾಜಕಾರಣಕ್ಕೆ ಆಹ್ವಾನಿಸುತ್ತಿದ್ದಾರೆ. ನಾನು ಯಾವಾಗ ಬೇಕಾದರೂ ರಾಷ್ಟ್ರ ರಾಜಕಾರಣಕ್ಕೆ ಹೋಗಬಹುದು ಎಂದು ಮುಂದಿನ ದಿನಗಳಲ್ಲಿ ಸಂಸದ ಸ್ಥಾನಕ್ಕೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದರು.
ಶಿರಾ ಕ್ಷೇತ್ರ ಕಾಂಗ್ರೆಸ್ನ ಭದ್ರ ಕೋಟೆ. ಕಾಂಗ್ರೆಸ್ ಆಕಾಂಕ್ಷಿಗಳು ಕಿತ್ತಾಡಿಕೊಂಡು ಬಂಡಾಯವಾಗಿ ಸ್ಪರ್ಧಿಸಿದಾಗ ಮಾತ್ರ ಜೆಡಿಎಸ್ ಗೆದ್ದಿದೆ. ಈ ಭಾರಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಟಿಕೆಟ್ಗಾಗಿ ಯಾರು ಅರ್ಜಿ ಹಾಕದೆ ನನ್ನ ಪರವಾಗಿ ಒಗ್ಗಟ್ಟಾಗಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಾಗಿ ಸಮೀಕ್ಷೆಗಳು ಹೇಳುತ್ತಿವೆ. ಹಾಗೇನಾದರೂ ಆದರೆ  ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ಅವರಷ್ಟೆ ನಾನೂ ಸರ್ಕಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತೇನೆ ಎಂದರು.  ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಎನ್.ಕೃಷ್ಣಯ್ಯ, ಪಾರ್ವತಮ್ಮ ಎಸ್.ಕೆ.ದಾಸಪ್ಪ, ಎ.ಪಿ.ಎಂ.ಸಿ. ಅಧ್ಯಕ್ಷ ಶಶಿಧರ ಗೌಡ, ಹಾಲು ಒಕ್ಕೂಟದ ನಿರ್ದೆಶಕ ಎಚ್.ಎಸ್.ಮೂಡಲಗಿರಿಯಪ್ಪ, ಕಾಂಗ್ರೆಸ್ ಅಧ್ಯಕ್ಷ ಅಲ್ಲಾಬಕ್ಷ್ ಪ್ಯಾರು, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣ, ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕ ಅಂದುಕುಂಟೆ ರವಿ, ಹುಣಸೇಹಳ್ಳಿ ಶಶಿಧರ್, ಮತ್ತಿತರರು ಮಾತನಾಡಿದರು.
ಜಿ.ಪಂ. ಸದಸ್ಯ ಅರೇಹಳ್ಳಿ ರಮೇಶ್, ಮಾಜಿ ಸದಸ್ಯ ಪಿ.ಆರ್.ಮಂಜುನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ
ಉದಯಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂಗಾವರ ಮಾರಣ್ಣ, ಎ.ಪಿ.ಎಂ.ಸಿ. ಅಧ್ಯಕ್ಷ ಶಶಿಧರ ಗೌಡ, ಕೃಷ್ಣೇಗೌಡ, ಡಿ.ಸಿ.ಅಶೋಕ್ ಸೇರಿದಂತೆ ಹಲವರು ಹಾಜರಿದ್ದರು. ಇದೇ ಸಂದರ್ಭದಲ್ಲಿ 200 ಕ್ಕೂ ಹೆಚ್ಚು ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್ ಪಕ್ಷವನ್ನು ಸೇರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement