ಸಿದ್ದಗಂಗಾಶ್ರೀ ಜನ್ಮದಿನೋತ್ಸವ ಮುಂದೂಡಿಕೆ
ತುಮಕೂರು: ಸಿದ್ದಗಂಗಾ ಶಿವಕುಮಾರಸ್ವಾಮಿಗಳ 106 ನೇ ಜನ್ಮದಿನೋತ್ಸವವನ್ನು ರಾಜ್ಯ ವಿಧಾನಸಭೆ ಚುನಾವಣೆ ನಿಮಿತ್ತ ಮುಂದೂಡಲಾಗಿದೆ ಎಂದು ಮಠದ ಆಡಳಿತಾಧಿಕಾರಿ ಎಸ್. ವಿಶ್ವನಾಥಯ್ಯ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಏ. 13 ರಂದು ಶ್ರೀಗಳ ಜನ್ಮದಿನಾಚರಣೆಗೆ ಸಕಲ ಸಿದ್ಧತೆ ನಡೆದಿದ್ದವು. ಆದರೆ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಸಮಾರಂಭ ನಡೆಸುವಂತಿಲ್ಲ ಎಂಬ ಚುನಾವಣಾ ಆಯೋಗದ ಸೂಚನೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಮುಂದೆ ಸಮಾರಂಭ ಏರ್ಪಡಿಸುವ ಕುರಿತಂತೆ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.