ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪೊಲೀಸ್ ಸಿಬ್ಬಂದಿ ನಡುವೆ ಪರಸ್ಪರ ತಿಳಿವಳಿಕೆ ಅಗತ್ಯ: ರಾಜು

Rashmi Kasaragodu
Updated On : 9 Apr 2013, 12:26 pm

ಕ.ಪ್ರ.ವಾರ್ತೆ   ಹುಳಿಯಾರು   ಏ.8
ಯಾವುದೇ ಕಾರ್ಯದಲ್ಲಿ ಸಂಪೂರ್ಣ ಯಶಸ್ಸು ಲಭಿಸಬೇಕಾದರೆ ಆ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲರೂ ಶ್ರದ್ಧೆಯಿಂದ ದುಡಿಯಬೇಕು. ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ನಡುವೆ ತಿಳಿವಳಿಕೆ ಇದ್ದಾಗ ಮಾತ್ರ ಭಿನ್ನಾಭಿಪ್ರಾಯಗಳು ಮೂಡದೆ ತಮ್ಮ ತಮ್ಮ ಕಾರ್ಯ ಮಾಡಬಹುದಾಗಿದೆ ಎಂದು ಪಿಎಸ್ಐ ಟಿ.ವಿ.ರಾಜು ಹೇಳಿದರು.  
ಹುಳಿಯಾರು ಪೊಲೀಸ್ ಠಾಣೆಯಲ್ಲಿ ಏಳು ತಿಂಗಳ ಕಾಲ ಕಾರ್ಯ ನಿರ್ವಹಿಸಿ ಚುನಾವಣಾ ಆಯೋಗದ ನಿಯಮದಂತೆ ವರ್ಗಾವಣೆಯಾದ ಅವರು ಸಿಬ್ಬಂದಿ ವರ್ಗದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸರ್ಕಾರಿ ಕೆಲಸ ನಿಂತ ನೀರಲ್ಲ, ಸದಾ ಹರಿಯುವ ಸ್ವಚ್ಛ ನೀರಿನಂತಿದ್ದು, ಸರ್ಕಾರಿ ನೌಕರರಿಗೆ ವರ್ಗಾವಣೆ ಎಂಬುದು ಕಟ್ಟಿಟ್ಟ ಬುತ್ತಿ ಎಂದರು.
ಪೊಲೀಸ್ ಕೆಲಸವು ನೀರ ಮೇಲಿನ ಗುಳ್ಳೆಯಂತಿದ್ದು, ದಿನದ ಇಪ್ಪತ್ನಾಲು ಗಂಟೆಗಳ ಕಾಲ ಎಚ್ಚೆತ್ತು ಕರ್ತವ್ಯ ನಿರ್ವಹಿಸಬೇಕಿದೆ. ಹುಳಿಯಾರು ಹಾಗೂ ಹಂದನಕೆರೆ ಠಾಣಾ ವ್ಯಾಪ್ತಿಯಲ್ಲಿನ ಜನರು ತಮ್ಮೊಂದಿಗೆ ಉತ್ತಮ ಸಹಕಾರ ಮನೋಭಾವ ಹೊಂದಿದ್ದರು. ಅಲ್ಲದೆ ಠಾಣೆ ಸಿಬ್ಬಂದಿ ತಮಗೆ ವಹಿಸಿದ ಕೆಲಸವನ್ನು ಚಾಚು ತಪ್ಪದೆ ಮಾಡುತ್ತಿದ್ದರು ಎಂದು ಶ್ಲಾಘಿಸಿದರು.
ಸಿಪಿಐ ಪ್ರಭಾಕರ್ ಮಾತನಾಡಿ, ರಾಜು  ತಮ್ಮ ವೃತ್ತದಲ್ಲಿ ಅನುಭವಿ ಹಾಗೂ ಹಿರಿಯ ಪಿಎಸೈ ಆಗಿದ್ದು,ತಮ್ಮ ಠಾಣಾ ವ್ಯಾಪ್ತಿಯಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಸುಲಲಿತವಾಗಿ ಬಗೆ ಹರಿಸುವ ಚಾಣಾಕ್ಷತೆ ಹೊಂದಿದ್ದರು ಎಂದರು. ಚಿ.ನಾ.ಹಳ್ಳಿ ಪಿಎಸೈ ಗೋವಿಂದಯ್ಯ, ಹಂದನಕೆರೆ ಪಿಎಸೈ ಮಂಜು, ಎಎಸೈ ಗಂಗಾಧರ್, ಕೃಷ್ಣಮೂರ್ತಾಚಾರ್, ಹಿರಿಯ ಪೇದೆಗಳಾದ ಬಸವರಾಜು, ಸಿದ್ದರಾಮಣ್ಣ, ಸಿಬ್ಬಂದಿ ವರ್ಗದ ಕುಮಾರ್, ನಾಗಭೂಷಣ್, ಮಹೇಶ್, ರಂಗಸ್ವಾಮಿ, ಕಾಂತರಾಜು, ಮಹಿಳಾ ಪೇದೆ ಕುಮುದಾ, ಸ್ಥಳೀಯರಾದ ಮಲ್ಲಿಕಣ್ಣ, ನಂದಿಹಳ್ಳಿ ಶಿವಣ್ಣ, ಬೀರಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement