ರಮಾನಂದ ಸ್ವಾಮೀಜಿಗೆ ಪಟ್ಟಾಭಿಷೇಕ
ಕ.ಪ್ರಭ. ವಾರ್ತೆ ಮಧುಗಿರಿ ಏ.8
ತಾಲೂಕಿನ ತಗ್ಗಿಹಳ್ಳಿ ಶ್ರೀರಾಮಕೃಷ್ಣ ಆಶ್ರಮದ ಹಿರಿಯ ಸ್ವಾಮೀಜಿ ಲಕ್ಷ್ಮೀನಾರಾಯಣ್ ಮಹರಾಜ್ ವಿಧಿವಶರಾದ ಪ್ರಯುಕ್ತ ತೆರವಾಗಿದ್ದ ಆ ಪೀಠಕ್ಕೆ ಆಶ್ರಮದಲ್ಲಿಯೇ ಅವರ ಸೇವೆ ಮಾಡಿ ಕೊಂಡಿದ್ದ ಕಿರಿಯ ಶ್ರೀಗಳಾದ ಶ್ರೀರಮಾನಂದ ಸ್ವಾಮೀಜಿ ಅವರನ್ನು ನೂತನ ಪೀಠಧ್ಯಾಕ್ಷರನ್ನಾಗಿ ಪಟ್ಟಾಭಿಷೇಕ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪಂಜಾಬ್ ಮೂಲದ ಪರಮಾನಂದಜಿ ಮಹಾರಾಜ್ ಸಾನಿಧ್ಯ ವಹಿಸಿದ್ದರು. 1008 ಸ್ವಾಮಿ ಗುರುಶರಣಾನಂದಾಜೀ ಕಾರ್ಷಿಣಿ ಮಹಾರಾಜ್, ಮಹಾರಾಜ್ ಮಂಡಲಾಧೀಶ್ವರರು ಉದಾಸೀನ್ ಕಾರ್ಶಿಣಿ ಆಶ್ರಮ, ರಮಣ ಮಹಾರಾಜ್, ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮ ಮಠದ ಬೈಯಾಂದಾಜಿ ಮಹಾರಾಜ್, ಸುಖಾನಂದಜೀ, ಕೇರಳದ ಕಲ್ಲಿಕೋಟೆ ಯೋಗೇಶ್ವರಾನಂದಜೀ ಮಹಾರಾಜ್, ಮಹೇಶನಂದಾಜೀ ಮಹಾರಾಜ್, ಅದ್ವೈತಾನಂದಾಜಿ ಮಹರಾಜ್, ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಮಾತೆ ಕಾಂತಮ್ಮ ಮತ್ತು ಪದ್ಮಾವತಮ್ಮ ಭಾಗವಹಿಸಿದ್ದರು. ಮಠದ ಸಹಸ್ರಾರು ಭಕ್ತರ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಶ್ರೀರಮಾನಂದ ಸ್ವಾಮಿಜೀ ಅವರ ಪಟ್ಟಾಭಿಷೇಕ ವಿಜೃಂಭಣೆಯಿಂದ ನೆರವೇರಿತು. ಅಧಿಕಾರ ಸ್ವೀಕರಿಸಿದ ಶ್ರೀಗಳು ಮಾತನಾಡಿ ಗುರು ಪರಂಪರೆಯ ಗೌರವವನ್ನು ಕಾಪಾಡಿಕೊಂಡು ಮಠದ ಘನತೆಯನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಮಹಲಿಂಗಪ್ಪ ರಾಜಿನಾಮೆ
ಹಾಸನ: ನಿವೃತ್ತ ಐಎಎಸ್ ಅಧಿಕಾರಿ ಕೆ.ಎಂ.ಪುಟ್ಟ ಸ್ವಾಮಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡದಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿರುವುದಾಗಿ ಸಿ.ಎನ್.ಮಹಾಲಿಂಗಪ್ಪ ತಿಳಿಸಿದ್ದಾರೆ. ಹೊಳೆನರಸೀಪುರ ಕ್ಷೇತ್ರದಿಂದ ಅವಕಾಶ ಸಿಕ್ಕರೆ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.