ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಮರ್ಥ ಅಭ್ಯರ್ಥಿ ನಿಲ್ಲಿಸಿ

Rashmi Kasaragodu
Updated On : 9 Apr 2013, 12:25 pm

ಕ.ಪ್ರ.ವಾರ್ತೆ   ತುಮಕೂರು   ಏ.8
ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಸಮರ್ಥ ಜೆಡಿಎಸ್ ಅಭ್ಯರ್ಥಿ ನಿಲ್ಲಿಸುವಂತೆ ಜಿಲ್ಲಾ ಜೆಡಿಎಸ್ ಮುಖಂಡರು ವರಿಷ್ಠರನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಬಿ ಫಾರಂ ನೀಡುವಲ್ಲಿ ವಿಳಂಬವಾಗಿದೆ. ಆಯ್ಕೆಯಲ್ಲಿ ತಪ್ಪುಗಳಾಗಬಾರದು. ನೋವಿಗೆ ಕಾರಣವಾಗಬಾರದು ಅನ್ನೋ ಕಾರಣದಿಂದ ವಿಳಂಬವಾಗಿರಬಹುದು. ಈ ನಂಬಿಕೆ ನಮ್ಮದು. ಜೆಡಿಎಸ್ ವೀಕ್ಷಕರ ಸಮ್ಮುಖದಲ್ಲಿ ಸುಮಾರು 20 ಮಂದಿ ತುಮಕೂರು ನಗರ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಹಾಕಿದ್ದೆವು. ಹೊರಗಿನ ಅಭ್ಯರ್ಥಿಗಳಿಗೆ ಅವಕಾಶ ನೀಡಲ್ಲ ಅನ್ನೋ ಭರವಸೆ ನಮ್ಮದು ಎಂದರು.
ರವೀಶ್ ಜಾಂಗೀರ್ ನಿಲ್ಲಲ್ಲ: ಈ ಬಾರಿ ರವೀಶ್ ಜಾಂಗೀರ್ ತುಮಕೂರು ನಗರ ಅಭ್ಯರ್ಥಿಯಾಗಿ ಕಣಕ್ಕಿಳಿಯಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಮುಂದೆ ಭರವಸೆ ನೀಡಿದ್ದರು. ಈ ಕುರಿತು ಹೈಕಮಾಂಡ್ನಲ್ಲಿ ಯಾವುದೇ ಗೊಂದಲವಿಲ್ಲ. ತುಮಕೂರು ನಗರಕ್ಕೆ ಹೊರಗಿನ ಅಭ್ಯರ್ಥಿಯನ್ನು ಕಣಕ್ಕಿಳಿಸಲ್ಲ ಎಂಬ  ಭರವಸೆಯನ್ನು ಜೆಡಿಎಸ್ ವರಿಷ್ಠರು ನೀಡಿದ್ದಾರೆ. ಆದರೆ ಟಿಕೆಟ್ ಹಂಚಿಕೆಯಲ್ಲಿ ತುಮಕೂರು ಗ್ರಾಮಾಂತರಕ್ಕೂ ನಗರಕ್ಕೂ ಸಂಬಂಧವಿಲ್ಲ ಎಂದ ಮುಖಂಡರು, ಟಿಕೆಟ್ ಬಿಕರಿಯಾಗಿಲ್ಲ. ಹಣದ ವಿಷಯ ಇಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಜೆಡಿಎಸ್ ಹಿರಿಯ ಉಪಾಧ್ಯಕ್ಷ ಕೆ.ಬಿ. ಬೋರೇಗೌಡ, ಪುಟ್ಟೀರಪ್ಪ, ನರಸೇಗೌಡ, ಬೆಳ್ಳಿ ಲೋಕೇಶ್, ನಗರಸಭೆ ಮಾಜಿ ಸದಸ್ಯ ನರಸಿಂಹರಾಜು ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement