ಯುವ ಮತದಾರರಿಗೆ ಜಾಗೃತಿ ಕಾರ್ಯಕ್ರಮ
ಕ.ಪ್ರಭ. ವಾರ್ತೆ ತಿಪಟೂರು ಏ.9
ನಗರದ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ ಆವರಣದಲ್ಲಿ ಯುವ ಮತದಾರರಿಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಮತಗಟ್ಟೆಗೆ ಬನ್ನಿ ಬದಲಾವಣೆ ತನ್ನಿ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ತಾ.ಸಮಾಜ ಕಲ್ಯಾಣಾಧಿಕಾರಿ ಡಿ.ಎಸ್.ಮಂಜುನಾಥ್ ಸಮಾಜ ಕಲ್ಯಾಣ ಇಲಾಖೆಯ ಕಾಲೇಜು ಬಾಲಕ, ಬಾಲಕಿಯರ ಮತ್ತು ಹಿಂದುವಳಿದ ವರ್ಗಗಳ, ಅಲ್ಪಸಂಖ್ಯಾತರ ಇಲಾಖೆಯ ಕಾಲೇಜು ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ಅರಿವು ಮೂಡಿಸಿದರು. ಬಿ.ಸಿ.ಎಂ.ವಿದ್ಯಾರ್ಥಿನಿಯದ ವಾರ್ಡ್ನ ಶಿವರಾಜು ಮತ್ತು ಸಿಬ್ಬಂದಿ ವರ್ಗದವರಿದ್ದರು.