ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಾಷ್ಟ್ರೀಯ ಪಕ್ಷಗಳಿಂದ ಮಾದಿಗ ಜನಾಂಗ ನಿರ್ಲಕ್ಷ್ಯ: ಆರೋಪ

Rashmi Kasaragodu
Updated On : 10 Apr 2013, 12:42 pm

ಕ.ಪ್ರಭ. ವಾರ್ತೆ   ಶಿರಾ   ಏ.9
ರಾಜ್ಯದಲ್ಲಿ 80 ಲಕ್ಷಕ್ಕೂ ಹೆಚ್ಚು ಮಾದಿಗ ಜನಾಂಗವಿದ್ದು 36 ಮೀಸಲು ಕ್ಷೇತ್ರಗಳಿವೆ. ಅದರಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಅಥವಾ ಬಿಜೆಪಿಯಾಗಲಿ ಒಬ್ಬರಿಗೂ ಈ ಜನಾಂಗಕ್ಕೆ ಸ್ಪರ್ದಿಸಲು ಅವಕಾಶ ನೀಡಿಲ್ಲ. ಈ ಜನಾಂಗದವರಿಗೆ ರಾಜ್ಯಾಡಳಿತದಲ್ಲಿ ಅವಕಾಶ ಒದಗಿಸಲು ಇಷ್ಟವಿಲ್ಲವೆ ಎಂದು ರಾಜ್ಯ ಮಾದಿಗ ದಂಡೋರ ಪ್ರಶ್ನಿಸಿದೆ.
ವಿಧಾನಸಭಾ ಚುನಾವಣೆಯಲ್ಲಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಯಾವ ಪಕ್ಷವೂ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿಲ್ಲ. ಒಳಮೀಸಲಾತಿಗೆ ಅವಕಾಶ ನೀಡುವ ಪಕ್ಷಕ್ಕೆ ಮಾತ್ರ ಮಾದಿಗ ಜನಾಂಗದವರು ಮತ ನೀಡಬೇಕು ಎಂದು ರಾಜ್ಯ ಮಾದಿಗ ದಂಡೋರ ಜನರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ  ಹೇಳಿಕೆ ನೀಡಿರುವ ಅವರು ಇನ್ನೂ ರಾಜ್ಯದಲ್ಲಿ ಎಡಗೈನವರ ಪರಿಸ್ಥಿತಿ ತೆಗೆದುಕೊಂಡರೆ  ಈ ಹಿಂದಿನ ಮೀಸಲಾತಿ ಪ್ರಮಾಣ ಶೇ. 15 ರಷ್ಟು ಮಾತ್ರ. ಮೀಸಲಾತಿ ರುಚಿಯು ಮಾದಿಗ ಜನಾಂಗಕ್ಕೆ ವಂಚನೆಯಾಗಿದ್ದು, ಇತ್ತೀಚೆಗೆ ಎ.ಜೆ.ಸದಾಶಿವ ಆಯೋಗದ ಶಿಫಾರಸು ಪ್ರಕಾರ ಮಾದಿಗರಿಗೆ ಶೇ. 6 ಸಿಗಬೇಕಾಗಿರುವುದು ನ್ಯಾಯ ಸಮ್ಮತವಾದುದು. ಆಗಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರಿಗೆ ಮಾದಿಗರಿಗೆ ಮೀಸಲಾತಿ ಪ್ರಮಾಣ ಜನಸಂಖ್ಯೆಗನುಗುಣವಾಗಿ ನೀಡಬೇಕು ಎಂದು ವರದಿ ಸಲ್ಲಿಸಿದ್ದರೂ, ಕಾರ್ಯ ರೂಪಕ್ಕೆ ತಂದಿಲ್ಲ. ಈಗ ಕರ್ನಾಟಕದ 36 ಮೀಸಲು ವಿಧಾನಸಭಾ ಕ್ಷೇತ್ರಗಳು ಇದ್ದು, ಸದಾಶಿವ ಆಯೋಗದ ಸಮೀಕ್ಷೆಯಂತೆ ರಾಜ್ಯದಲ್ಲಿ 70 ರಿಂದ 80 ಲಕ್ಷದವರೆಗೆ ಮಾದಿಗ ಮತಗಳು ಇವೆ. ಆದರೆ 2013ರ ಚುನಾವಣೆಗೆ ಏನಾದರೂ ಸ್ಪರ್ಷರಿಗೆ ಮಾತ್ರ ಮಣೆ ಹಾಕುವ ಪಕ್ಷಗಳು ಕಂಡರೆ ಮಾದಿಗ ಸಮೂಹ ತಕ್ಕ ಪಾಠ ಕಲಿಸುತ್ತದೆ ಎಂದರು.
ಈಗ ನಡೆಯುವ 36 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಸಮೂಹದವರು ಹೆಚ್ಚಿಗೆ ಮತದಾರರಿದ್ದಾರೆ ಎನ್ನುವುದನ್ನು ಅರಿತು ಆಯಾ ಪಕ್ಷದ ವತಿಯಿಂದ ಬಿ ಫಾರಂ ನೀಡಬೇಕು. ಇದು ನಮ್ಮ ಸಂಘಟನೆಯ ಧ್ಯೇಯವಾಗಿದೆ. ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಷರೆ ಅಸ್ಪೃಶ್ಯರನ್ನು ರಾಜಕೀಯವಾಗಿ ತುಳಿಯುವ ಲಾಭಿ ಮಾಡುತ್ತಿದ್ದಾರೆ. ಇದನ್ನು ಜನಾಂಗ ವಿರೋಧಿಸುತ್ತದೆ ಎಂದರು.
ಆದ್ದರಿಂದ ಮಾದಿಗ ಬಂಧುಗಳು ತಾವು ವಾಸಿಸುವ ನಗರಗಳಿಗಾಗಲಿ, ಕೇರಿಗಳಿಗಾಗಲಿ, ಗ್ರಾಮಗಳಿಗಾಗಲಿ ಮತಗಳನ್ನು ಕೇಳಲು ಬಂದಾಗ ಒಳ ಮೀಸಲಾತಿ ಒಪ್ಪಂದದ ಬಗ್ಗೆ ಅವರ ನಿಲುವನ್ನು ಕೇಳಿ.
ನಮ್ಮ ನಿಲುವಿಗೆ ಬದ್ಧರಾದವರಿಗೆ ಮಾತ್ರ ಮತ ನೀಡಿ ಎಂದು ರಾಜ್ಯ ಮಾದಿಗ ದಂಡೋರ ಸಂಸ್ಥಾಪಕ ಅಧ್ಯಕ್ಷ ಮಾಪಣ್ಣ ಹದನೂರ, ಪ್ರಧಾನ ಕಾರ್ಯದರ್ಶಿ ಮಾಗೋಡು ಯೋಗಾನಂದ್, ಕಾರ್ಯಾಧ್ಯಕ್ಷ ಮಾಗೋಡು ಭೂತರಾಜ್, ಉಪಾಧ್ಯಕ್ಷ ಎಂ.ವಿ.ರಾಘವೇಂದ್ರ, ತಾಲೂಕು ಅಧ್ಯಕ್ಷ ಸತೀಶ್  ಮಾದಿಗ ಜನಾಂಗಕ್ಕೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement