ಅಭಿವೃದ್ಧಿ ಪ್ರಯತ್ವವೇ ಶ್ರೀರಕ್ಷೆ: ಶಾಸಕ ಎಸ್.ಆರ್.ಶ್ರೀನಿವಾಸ್ ವಿಶ್ವಾಸ
ಗುಬ್ಬಿ: ಕಳೆದ 10 ವರ್ಷಗಳಲ್ಲಿ 195 ಕೋಟಿ ವೆಚ್ಚದಲ್ಲಿ ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಗ್ರಾಮೀಣ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗಿದೆ ಮಾತ್ರವಲ್ಲ, ಗುಬ್ಬಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಜನಪರ ಸಾಧನೆಗಳೇ ಪ್ರಸಕ್ತ ಚುನಾವಣಿಯಲ್ಲಿ ತಮಗೆ ಶ್ರೀರಕ್ಷೆಯಾಗಲಿದೆ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಈ ಸಂಬಂಧ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಗುಬ್ಬಿ ತಾಲೂಕಿನ ಯಾವುದೇ ಗ್ರಾಮದಲ್ಲೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಹೆಚ್ಚುವರಿಯಾಗಿ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಆದರೆ, ಅಂತರ್ಜಲ ಕುಸಿತದಿಂದಾಗಿ ಕೆಲವು ಕಡೆಗಳಲ್ಲಿ ಇತ್ತೀಚೆಗೆ ಕೊರೆಸಿದ ಕೊಳವೆ ಬಾವಿಗಳ ನೀರು ಬಾರದೆ ಕುಡಿಯುವ ನೀರಿನ ಸಮಸ್ಯೆ ಕಂಡುಬರುತ್ತಿದೆ ಎಂದರು. ರಾಜ್ಯದಲ್ಲಿ ಜೆಡಿಎಸ್ ಸರ್ಕಾ ಅಸ್ತಿತ್ವದಲ್ಲಿದ್ದಾಗ ಹಲವು ಮಹತ್ವಪೂರ್ಣ ಯೋಜನೆ ಜಾರಿಗೊಳಿಸಲಾಗಿತ್ತು. ಆದರೆ ಬಿಜೆಪಿ ಪಕ್ಷ ಮಹತ್ವದ ಯೋಜನೆಗಳನ್ನು ಮುಂದುವರಿಸದೆ ನಿರ್ಲಕ್ಷಿಸಿದ್ದೇ ಇಂದು ವಿದ್ಯುತ್ ಮತ್ತು ಕುಡಿವ ನೀರಿನ ಸಮಸ್ಯೆ ಉಂಟಾಗಲು ಕಾರಣವಾಯಿತು ಎಂದು ಕಿಡಿಕಾರಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಗುರುರೇಣುಕಾರಾಧ್ಯ, ಜಿ.ಪಂ.ಮಾಜಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ, ಮುಖಂಡರಾದ ಜಿ.ವಿ.ಮಂಜುನಾಥ್, ಮಹಮದ್ ಷಫಿ, ಚೆನ್ನಬಸವಣ್ಣ, ಎಚ್.ಡಿ.ಯಲ್ಲಪ್ಪ,ದಕ್ಷಿಣಾಮೂರ್ತಿ ಇದ್ದರು.