ಜೆಡಿಎಸ್ ತೊರೆದು ಕೆಜೆಪಿ ಸೇರ್ಪಡೆ
ತುಮಕೂರು: ಪಾವಗಡದ ನೂರಾರು ಜೆಡಿಎಸ್ ಕಾರ್ಯಕರ್ತರು ಕೆಜೆಪಿಗೆ ಸೇರ್ಪಡೆಯಾದರು. ಜೆಡಿಎಸ್ ಮುಖಂಡ ಶೌಕತ್ ಆಲಿ ತಮ್ಮ ನೂರಾರು ಬೆಂಬಲಿಗರೊಂದಿಗೆ ಜೆಡಿಎಸ್ ತೊರೆದು ಕೆಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಾವಗಡ ತಾಲೂಕಿನ ರೈತರಿಗೆ ನದಿ ನೀರು ತರುವ ಯೋಜನೆ ಇಟ್ಟುಕೊಂಡಿರುವ ಯುವಕ ಪಾವಗಡ ಶ್ರೀರಾಮ್. ಹೋಬಳಿ, ಪಟ್ಟಣ ಪ್ರದೇಶಗಳಲ್ಲಿ ಸುಮಾರು 26 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಸಂಕಲ್ಪ ತೊಟ್ಟಿರುವ ಹೋರಾಟಗಾರ ಈ ನಿಟ್ಟಿನಲ್ಲಿ ಅವರನ್ನು ಬೆಂಬಲಿಸಿ ಕೆಜೆಪಿ ಸೇರಿದ್ದೇವೆ ಎಂದರು. ಕೆಜೆಪಿ ಮುಖಂಡ ನರಸಿಂಹರೆಡ್ಡಿ, ಪಾವಗಡ ತಾಲೂಕು ಕೆಜೆಪಿ ಅಧ್ಯಕ್ಷ ರವಿಶಂಕರ್, ಪ್ರಧಾನ ಕಾರ್ಯದರ್ಶಿ ಅಮೀರ್, ಕಡಮಲಕುಂಟೆ ಅಡವಪ್ಪ ಮತ್ತಿತರರು ಇದ್ದರು.