ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನೀತಿ ಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ: ದೊರೆರಾಜ್

Mainashree
Updated On : 11 Apr 2013, 1:36 am

ಶಿರಾ: ಶಿರಾ ವಿಧಾನಸಭಾ ಚುನಾವಣೆ ಸಂಬಂಧ ತಾಲೂಕಿನಲ್ಲಿ 264 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಇದರಲ್ಲಿ ನಗರದಲ್ಲಿ 41 ಮತಗಟ್ಟೆ,  ಗ್ರಾಮಾಂತರ ಪ್ರದೇಶದಲ್ಲಿ 223 ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಚುನಾವಣಾಧಿಕಾರಿ ದೊರೆರಾಜ್ ತಿಳಿಸಿದರು. ಅವರು ಪಟ್ಟಣದಲ್ಲಿ ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಟ್ಟು 264 ಮತಗಟ್ಟೆಗಳ ಪೈಕಿ 50 ಅತಿ ಸೂಕ್ಷ್ಮ, 57 ಸೂಕ್ಷ್ಮ ಮತಗಟ್ಟೆಗಳು ಎಂದು ಗುರ್ತಿಸಲಾಗಿದೆ. ಇಂದಿನಿಂದ ಚನಾವಣಾ ಅಧಿಸೂಚನೆ ಪ್ರಾರಂಭವಾಗಿದೆ  ಎಂದು ತಿಳಿಸಿದರು. ಕ್ಷೇತ್ರದಲ್ಲಿ ಒಟ್ಟು 1,95,416 ಮತದಾರರಿದ್ದು ಇದರಲ್ಲಿ ಪುರುಷರು 1,00,300, ಮಹಿಳಾ ಮತದಾರರು 95,116 ರಷ್ಟು ಇದ್ದಾರೆ. ಯಾವುದೇ ಪಕ್ಷದ ಅಭ್ಯರ್ಥಿಗಳಾಗಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಲ್ಲಿ. ಅವರ ಮೇಲೆ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಸಹಾಯಕ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಎ.ಬಿ.ಕುಲಕರ್ಣಿ, ನೋಡಲ್ ಅಧಿಕಾರಿಗಳಾದ ಬಿ.ಟಿ.ರಂಗಸ್ವಾಮಿ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement