ಅಬಕಾರಿ ದಾಳಿ: ಅಕ್ರಮ ಮದ್ಯ ವಶ
ಮಂಡ್ಯ: ಅಬಕಾರಿ ಉಪ ಆಯುಕ್ತ ಎಚ್.ಎನ್. ಆನಂದ್ ಅವರ ನಿರ್ದೇಶನದ ಮೇರೆಗೆ ಮಂಡ್ಯ ಅಬಕಾರಿ ಉಪ ಅಧೀಕ್ಷಕರು ಏ.10ರಂದು ತಾಲೂಕಿನ ಶ್ರೀನಿವಾಸಪುರದ ಎಸ್.ಡಿ.ಜಯರಾಂ ಕಾಲೋನಿಯಲ್ಲಿ ಶ್ರೀನಿವಾಸ್ ಅವರ ಮನೆಯಲ್ಲಿ ದಾಳಿ ನಡೆಸಿ 8.100 ಲೀಟರ್ ಮದ್ಯ ಹಾಗೂ 1.320 ಲೀಟರ್ ಬಿಯರ್ ವಶಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಂಡ್ಯ ವಲಯ ಅಬಕಾರಿ ನಿರೀಕ್ಷಕರು ತಾಲೂಕಿನ ಹೊಸ ಬೂದನೂರು ಗ್ರಾಮದ ಚನ್ನಪ್ಪ ಎಂಬವರಿಗೆ ಸೇರಿದ ಪೆಟ್ಟಿಗೆ ಅಂಗಡಿಯನ್ನು ದಾಳಿ ಮಾಡಿ 1.260 ಲೀಟರ್ ಮದ್ಯ ವಶಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ಮೊಕದ್ದಮೆ ದಾಖಲಿಸಿದ್ದಾರೆ. ಬಸರಾಳು ಹೋಬಳಿಯ ಕೋಡಿಕೊಪ್ಪಲು ಗ್ರಾಮದ ಕೇಶವ ಎಂಬುವರಿಗೆ ಸೇರಿದ ಪೆಟ್ಟಿಗೆ ಅಂಗಡಿಯನ್ನು ದಾಳಿ ಮಾಡಿ 1.800 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿಡಲಾಗಿದೆ.