ಕೆಜೆಪಿ ಅಭ್ಯರ್ಥಿ ಮತಯಾಚನೆ
ತಿಪಟೂರು: ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಲಂಬಾಣಿ ತಾಂಡ್ಯದ ಅಭಿವೃದ್ಧಿ ನಿಗಮ ಸ್ಥಾಪಿಸಿದ ಕೀರ್ತಿ ಯಡಿಯೂರಪ್ಪಗೆ ಸಲ್ಲುತ್ತದೆ ಎಂದು ಕೆಜೆಪಿ ಅಭ್ಯರ್ಥಿ ಲೋಕೇಶ್ವರ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ಕೆಜೆಪಿ ಘಟಕದ ವತಿಯಿಂದ ನಡೆದ ತಾಲೂಕು ಸೇವಾಲಾಲ್ ಲಂಬಾಣಿ ಸಂಘದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಲಂಬಾಣಿ ಸಮಾಜವು ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದು, ಕೆಜೆಪಿ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದರು.
ತಾಲೂಕು ಸೇವಾಲಾಲ್ ಲಂಬಾಣಿ ಸಂಘದ ಅಧ್ಯಕ್ಷ ಬಿ.ಟಿ.ಕುಮಾರ್, ಕೆ.ಡಿ.ಪಾಳ್ಯದ ಬಾಬು, ರಾಮನಾಯ್ಕ, ಮಾಚಕಟ್ಟೆ ತಾಂಡ್ಯದ ಕೆಂಪನಾಯ್ಕ,ನಟರಾಜ್, ರಮೇಶ್, ಚೇತನ್, ಕುಮಾರನಾಯ್ಕ ಮತ್ತಿತರರು ಉಪಸ್ಥಿತರಿದ್ದರು.