ಮತದಾನ ಜಾಗೃತಿ ಬೀದಿ ನಾಟಕ
ಕ.ಪ್ರ. ವಾರ್ತೆ , ತಿಪಟೂರು , ಏ.12
ತಾಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹೆಚ್.ಭೈರಾಪುರ ಗ್ರಾಮದಲ್ಲಿ ಲೋಕ ಶಿಕ್ಷಣ ಸಮಿತಿ ವತಿಯಿಂದ ಪಾವಗಡದ ಕಲಾಜಾತ ತಂಡದಿಂದ ಸಾಕ್ಷರ ಭಾರತ್ ಮತ್ತು ನಿರ್ಮೂಲ ಭಾರತ್ ಹಾಗೂ ಮತದಾನದ ಅರಿವು ಮೂಡಿಸುವ ಬೀದಿ ನಾಟಕ ಆಯೋಜಿಸಲಾಗಿತ್ತು.
ಗ್ರಾ.ಪಂ.ಸದಸ್ಯ ತಿಮ್ಮನಾಯ್ಕ ಕಾರ್ಯಕ್ರಮ ಉದ್ಘಾಸಿದರು. ಗ್ರಾಮದ ಮುಖಂಡರಾದ ಹುಚ್ಚಪ್ಪ, ರಾಜಪ್ಪ, ಕೃಷ್ಣಪ್ಪ, ತಾಲೂಕು ಸಂಯೋಜಕ ಬಸವರಾಜ್, ಪ್ರೇರಕಿಯರಾದ ತ್ರಿವೇಣಿ, ಮಧು ಹಾಗೂ ಸ್ತ್ರೀಶಕ್ತಿ ಸಂಘದ ನೂರಾರು ಮಹಿಳೆಯರು, ಗ್ರಾಮಸ್ಥರು ಭಾಗವಹಿಸಿ ಪ್ರಯೋಜನ ಪಡೆದರು.