ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶುಕ್ರವಾರ 5 ನಾಮಪತ್ರ

Vishwanath S
Updated On : 12 Apr 2013, 11:13 am

ತುಮಕೂರು: ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನಸಭಾ  ಕ್ಷೇತ್ರ, ತುಮಕೂರು ನಗರ ಮತ್ತು  ಗುಬ್ಬಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಒಟ್ಟು 5 ನಾಮಪತ್ರ ಸಲ್ಲಿಕೆಯಾಗಿದೆ. ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಸಿ.ಎನ್. ರವಿಕಿರಣ್ ಸ್ವತಂತ್ರಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ವತಿಯಿಂದ ನಜೀರ್‌ಬೇಗ್ ಎಂಬುವರು ಮೂರು ನಾಮಪತ್ರ ಸಲ್ಲಿಸಿದ್ದಾರೆ. ಗುಬ್ಬಿ ವಿಧಾನಸಭಾ  ಕ್ಷೇತ್ರದಿಂದ ಎ.ಆರ್.  ಶ್ರೀನಿವಾಸಮೂರ್ತಿ ಸ್ವತಂತ್ರಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.  
ಹುಳಿಯಾರಿನಲ್ಲಿ ಯುಗಾದಿ ಸಂಭ್ರಮ
ಹುಳಿಯಾರು: ಹೊಸ ವರ್ಷಕ್ಕೆ ಮುನ್ನುಡಿಯಾಗಿರುವ ಹಿಂದೂ ಸಂಪ್ರದಾಯದ ಪ್ರಮುಖ ಹಬ್ಬ ಹಾಗೂ  ವಿಜಯನಾಮ ಸಂವತ್ಸರದ ಮೊದಲ ದಿನವಾದ ಯುಗಾದಿ ಹಬ್ಬವನ್ನು ಗುರುವಾರ ಹುಳಿಯಾರಿನಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಸಂಪ್ರದಾಯದಂತೆ ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ, ಮನೆಮಂದಿಯೆಲ್ಲ ಅಭ್ಯಂಜನ ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು ವಿವಿಧ ದೇವರುಗಳಿಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಜೀವನದಲ್ಲಿ ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಎರಡನ್ನೂ ಸಮಾನವಾಗಿ ಸ್ವೀಕಸಬೇಕೆಂಬ ಸಂಕೇತ ಸಾರುವ ಬೇವು-ಬೆಲ್ಲ ಸೇವಿಸಿದರು. ಯುಗಾದಿ ಹಬ್ಬದಲ್ಲಿ ಬೇವು-ಬೆಲ್ಲದ ಜತೆ ಪಂಚಾಂಗ ಪೂಜೆ ಕೂಡ ಬಹುಮುಖ್ಯ ಆಚರಣೆಯಾಗಿದ್ದು, ಅಂದು ಹೊಸ ಪಂಚಾಂಗ ತಂದು ಪೂಜಿಸಿ ಪಂಚಾಂಗ ಶ್ರವಣ ಮಾಡಿ ಆ ವರ್ಷದ ಆಯವ್ಯಯ, ಆರೋಗ್ಯ ಮುಂತಾದವುಗಳನ್ನು ಅವರವರ ರಾಶಿ ಫಲದ ಮೇಲೆ ತಿಳಿದುಕೊಳ್ಳಲಾಗುವುದು.ವಿಜಯನಾಮ ಸಂವತ್ಸರದಲ್ಲಿ ಭದ್ರತೆ,ಅಸ್ಥಿರತೆ, ಸಾಮಾಜಿಕ ಏರಿಳಿತ, ನೈಸರ್ಗಿಕ ವಿಕೋಪಗಳನ್ನು ಪಂಚಾಂಗ ಶ್ರವಣದ ಮೂಲಕ  ತಿಳಿದು ಕೊಳ್ಳಲಾಗುವುದು.  ಸಂಜೆ ಮನೆ-ಮಂದಿ ಜತೆ ಹಿರಿಯರು ಸೇರಿದಂತೆ ಕುಟುಂಬದ ಕಿರಿಯರು  ಬಿದಿಗೆ ಚಂದ್ರನ ದರ್ಶನ ಪಡೆದರು. ಒಟ್ಟಾರೆ 2 ದಿನಗಳ ಕಾಲ ಯುಗಾದಿ ಸಂಭ್ರಮ ತುಂಬಿ ತುಳುಕುತ್ತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement