ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೊಬ್ಬರಿ ನಾಡಲ್ಲಿ ಅರೆಸೇನೆ ತಂಡ ಪಥಸಂಚಲನ

Mainashree
Updated On : 13 Apr 2013, 11:01 am

ಕ.ಪ್ರ. ವಾರ್ತೆ  ತಿಪಟೂರು  ಏ.13
ಚುನಾವಣೆ ಸಂದರ್ಭದಲ್ಲಿ ಕಲ್ಪತರು ನಾಡಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಯಂತ್ರಣದಲ್ಲಿಡಲು ಕೇಂದ್ರದ ಪ್ಯಾರಾ ಮಿಲ್ಟ್ರಿಯ ಕ್ಷಿಪ್ರ ಕಾರ್ಯಾಚರಣೆಯ 3 ತಂಡಗಳು ನಗರಕ್ಕೆ ಆಗಮಿಸಲಿದ್ದು, ಇಂದು ನೂರು ಜನ ಯೋಧರ ಒಂದು ತಂಡ ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಜೊತೆ ನಗರದಲ್ಲಿ ಪಥ ಸಂಚಲನ ನಡೆಸಿತು.
 ಮೇ 5ರಂದು ನಡೆಯುವ ಚುನಾವಣೆವರೆವಿಗೂ ಜನತೆ ಯಾವುದೇ ಭಯ, ಆತಂಕಪಡದಂತೆ ಹಾಗೂ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಯಶಸ್ವಿಯಾಗುವಂತೆ ನಾಗರಿಕರಲ್ಲಿ ಧೈರ್ಯ ತುಂಬಲು ಪೊಲೀಸ್ ಸಿಬ್ಬಂದಿಯ ಜೊತೆಗೆ ಪ್ಯಾರಾ ಮಿಲ್ಟ್ರಿಯ ಕ್ಷಿಪ್ರ ತಂಡ ನಗರ ಹಾಗೂ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಪಥಸಂಚಲನ ನಡೆಸಿ ಸಾರ್ವಜನಿಕರಿಗೆ ಮತದಾನದ ಬಗ್ಗೆ ಜಾಗೃತಿಯನ್ನು ಮೂಡಿಸಿ ಚುನಾವಣೆ ಶಾಂತಿಯುತವಾಗಿ ನಡೆಯಲು ಸಹಕರಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement