ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಉಗ್ರನರಸಿಂಹಪ್ಪ: ಪಟಾಕಿ ಸಿಡಿಸಿ ಸಂಭ್ರಮ

Mainashree
Updated On : 13 Apr 2013, 11:01 am

ಪಾವಗಡ: ರಾಜ್ಯಾಧ್ಯಕ್ಷ ಬಿ.ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಉಗ್ರನರಸಿಂಹಪ್ಪ ಎಂದು ಅಧಿಕೃತ ಪ್ರಕಟಣೆ ಹೊರಬಿದ್ದ ಕೂಡಲೇ ಅವರ ನೂರಾರು ಬೆಂಬಲಿಗ ಕಾರ್ಯಕರ್ತರು ಪಟ್ಟಣದ  ಶ್ರೀ ಶನೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು. ನಂತರ ಅಭ್ಯರ್ಥಿ ಉಗ್ರನರಸಿಂಹಪ್ಪ ನೇತೃತ್ವದಲ್ಲಿ ಬೆಂಗಲಿಗ ಕಾರ್ಯಕರ್ತರು  ಶನೇಶ್ವರ ದೇವಸ್ಥಾನದಲ್ಲಿ ಪ್ರಚಾರಕ್ಕೆ ಚಾಲನೆ ನೀಡಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಶ್ರೀರಾಮುಲು, ರಾಜ್ಯ ಮುಖಂಡರಾದ ಜನಾರ್ದನರೆಡ್ಡಿ, ಸೋಮಶೇಖರ್‌ರೆಡ್ಡಿ ಮುಂತಾದ ಮುಖಂಡರಿಗೆ ಜೈಕಾರ ಹಾಕಿ ಈ ಬಾರಿ ಬಿಎಸ್‌ಆರ್ ಗೆಲವು ಖಚಿತವೆಂದು ಘೋಷಣೆ ಕೂಗುವ ಮೂಲಕ ಗ್ರಾಮಾಂತರ ಪ್ರದೇಶಗಳ ಮನೆ ಮನೆ ಪ್ರಚಾರಕ್ಕೆ ತೆರಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement