ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಡ್ಡಗಟ್ಟಿ ಹಣ, ಚಿನ್ನದ ಉಂಗುರ ದೋಚಿ ಪರಾರಿ

Mainashree
Updated On : 14 Apr 2013, 11:28 am

ಕ.ಪ್ರ.ವಾರ್ತೆ  ಕೊರಟಗೆರೆ  ಏ.14
ದಾರಿಯಲ್ಲಿ ಹೋಗುತ್ತಿದ್ದ ದಂಪತಿ ಹಾಗೂ ಯುವಕನನ್ನು ಅಡ್ಡಗಟ್ಟಿ ಹಣ ಮತ್ತು ಚಿನ್ನದ ಉಂಗುರವನ್ನು ದೋಚಿ ಪರಾರಿಯಾದ ಘಟನೆ ತಾಲೂಕಿನ ಮಾವತ್ತೂರು ಸಮೀಪ ನಡೆದಿದೆ.
ತಾಲೂಕಿನ ದೊಡ್ಡಸಾಗ್ಗೆರೆ ಗ್ರಾಮದ ಯುವಕರ ತಂಡ 4 ಮಂದಿ ಮೊದಲು ಗೌರಿಬಿದನೂರು ತಾಲೂಕಿನ ಮಲ್ಲಸಂದ್ರ ಗ್ರಾಮದ ಮಂಜುನಾಥ ಎಂಬಾತ ಹನುಮಂತಪುರ ಗ್ರಾಮದಲ್ಲಿರುವ ಸಂಬಂದಿಕರ ಮನೆಗೆ ನಡೆದು ಬರುವಾಗ ದಾರಿಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಬಂದ ಯುವಕರನ್ನು ಡ್ರಾಪ್ ಕೇಳಿದಾಗ ಕರೆದೊಯ್ದ ಯುವಕರು ಪೋಲೇನಹಳ್ಳಿ ಕ್ರಾಸ್ ಬಳಿ ನಿಲ್ಲಿಸಿ ಬೆದರಿಸಿ ಸುಮಾರು ಎರಡೂವರೆ ಸಾವಿರ ರು. ಕಿತ್ತು ಕೊಂಡು ಪರಾರಿಯಾಗಿದ್ದಾರೆ.
ಮತ್ತೊಂದು  ಪ್ರಕರಣದಲ್ಲಿ ಬೆಂಗಳೂರಿನ ವಾಸಿಯಾದ ರಂಗಧಾಮ ಮತ್ತು ಆತನ ಪತ್ನಿ ದ್ವಿಚಕ್ರ ವಾಹನದಲ್ಲಿ ತಾಲೂಕಿನ ಎಂ. ಹೊಸಹಳ್ಳಿಯ ಸಂಬಂದಿಕರ  ಮನೆಯಲ್ಲಿ ಊಟ ಮುಗಿಸಿಕೊಂಡು ತಮ್ಮ ಸ್ವಂತ ಊರಾದ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಗೆ ಹೋಗುವಾಗ ಮಾರ್ಗ ಮಧ್ಯೆ ಇದೇ ಯುವಕರ ತಂಡ ಸಿಕ್ಕಿದ್ದು  ರಸ್ತೆ ಮಾಹಿತಿ ಕೇಳಿದ್ದಾರೆ. ವಿಳಾಸ ಹೇಳಿ ಅವರನ್ನು ಹಿಂಬಾಲಿಸಿ ಅಡ್ಡಗಟ್ಟಿದ ತಂಡ ದಂಪತಿಗಳನ್ನು ಬೆದರಿಸಿ ಕೈಯಲ್ಲಿದ್ದ ಚಿನ್ನದ ಉಂಗುರವನ್ನು  ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಕೊರಟಗೆರೆ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement