'ಕಟ್ಟಕಡೆ ಮನುಷ್ಯನ ಧ್ವನಿ'
ಕನ್ನಡಪ್ರಭ ವಾರ್ತೆ ಮಧುಗಿರಿ ಏ.14
ಅಂಬೇಡ್ಕರ್ ಕಟ್ಟ ಕಡೆಯ ಮನುಷ್ಯನ ಧ್ವನಿಯಾಗಿ ಸಾಮಾಜಿಕ ನ್ಯಾಯ ಒದಗಿಸಲು ಬದ್ಧರಾಗಿದ್ದರು ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ನುಡಿದರು.
ಪಟ್ಟಣದ ಎಸ್‌ಬಿಎಂ ಶಾಖೆ ಮುಂದೆ ಕನ್ನಡ ಜಾಗೃತಿ ವೇದಿಕೆ ವತಿಯಿಂದ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಅವರ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಸೈದ್ಧಾಂತಿಕವಾಗಿ ಗಾಂಧೀಜಿ ಅವರಿಗಿಂತ ಭಿನ್ನ ರೀತಿಯ ಚಿಂತನೆಗಳು ಅವರದಾಗಿತ್ತು ಎಂದ ಅವರು, ಅಂಬೇಡ್ಕರ್ ದೀನ ದಲಿತರ ಹಾಗೂ ತುಳುತಕ್ಕೆ ಒಳಗಾದ ಜನಾಂಗಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ಬದ್ಧರಾಗಿದ್ದರು ಎಂದರು.
ತಾಲೂಕು ಜೀವಿಕ ಸಂಘಟನೆ ಸಂಚಾಲಕ ಡಿ.ಟಿ. ಸಂಜೀವಮೂರ್ತಿ ಅಂಬೇಡ್ಕರ್ ಜಯಂತಿ ಕೇವಲ ಆಚರಣೆಗೆ ಸೀಮಿತವಾಗದೆ ಅವರ ವಿಚಾರ ಧಾರೆಗಳು ಸಮಾಜದಲ್ಲಿ ನಿತ್ಯ ಜೀವಂತವಾಗಬೇಕು ಎಂದು ಆಗ್ರಹಿಸಿದರು. ತಾ.ಕನ್ನಡ ಜಾಗೃತಿ ವೇದಿಕೆ ಗೌರವಾಧ್ಯಕ್ಷ ಕೇಬಲ್ ಸುಬ್ಬು ಮಾತನಾಡಿ, ನಮ್ಮ ಸಂಘಟನೆ ವತಿಯಿಂದ ಪ್ರತಿ ವರ್ಷದಂತೆ ಈ ಸಲವು ಈ ಇಬ್ಬರ ಮಹಾನ್ ನಾಯಕರ ಜನ್ಮ ದಿನಾಚರಣೆ ಆಚರಿಸುತ್ತಿದ್ದೇವೆ ಎಂದರು. ತಾ.ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ದಲಿತ ಮುಖಂಡರಾದ ರವಿಕುಮಾರ್, ಗುಂಡಗಲ್ ಶಿವಣ್ಣ, ಡಿ.ವಿ.ಹಳ್ಳಿ ಪ್ರಭು, ಸಂಪಾದಕ ಎಂಎಸ್‌ಬಿಆರ್ಪಿ ಕುಮಾರ್, ಪಾಂಡು ಇನ್ನು ಅನೇಕರು ಉಪಸ್ಥಿತರಿದ್ದರು.