ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿಜೆಪಿಯಿಂದ ಭಾರಿ ಅಭಿವೃದ್ಧಿ ಕಾರ್ಯ: ಕೆಎಸ್‌ಕೆ ಶ್ಲಾಘನೆ

Mainashree
Updated On : 14 Apr 2013, 11:26 am

ಹುಳಿಯಾರು : ಚಿಕ್ಕನಾಯಕನಹಳ್ಳಿ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲ ತಿಂಗಳ ಹಿಂದೆ  ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಶಂಕುಸ್ಥಾಪನೆ ನೆರವೇರಿಸಿದ್ದ ತಾಲೂಕಿನ  26 ಕೆರೆಗಳಿಗೆ ಹೇಮಾವತಿ  ನೀರು ಹರಿಸುವ 102 ಕೋಟಿ ರು.ಗಳ  ಕಾಮಗಾರಿ ಶನಿವಾರ ವಿದ್ಯುಕ್ತವಾಗಿ ಚಾಲನೆಗೊಂಡಿರುವುದು ಬಿಜೆಪಿ ಸರ್ಕಾರವು ಕೈಗೊಂಡಿರುವ  ಅಭಿವೃದ್ಧಿ ಕಾರ್ಯಗಳಿಗೆ ಹಿಡಿದ ಕನ್ನಡಿಯಾಗಿದೆ ಎಂದು ಚಿ.ನಾ.ಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್ ತಿಳಿಸಿದರು.
 ಹುಳಿಯಾರಿನ ತಮ್ಮ ನಿವಾಸಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ಪ್ರಸ್ತಾವಿಸಿದ ಅವರು ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಸರ್ಕಾರಿ ಜಾಗಗಳಲ್ಲಿ ಮಾತ್ರ ಕಾಮಗಾರಿ ನಡೆಯಲಿದ್ದು ನಂತರದ ದಿನಗಳಲ್ಲಿ ಸಂಪೂರ್ಣವಾಗಿ ಕಾಮಗಾರಿ ನಡೆಯುತ್ತದೆ ಎಂದರು.
 ಕ್ಷೇತ್ರದಲ್ಲಿ ವಿರೋಧ ಪಕ್ಷ ಅಧಿಕಾರದಲ್ಲಿದರೂ ಸಹ ಕ್ಷೇತ್ರದ ಅಭಿವೃದ್ಧಿಯನ್ನು ಮನಗಂಡು  ಬಿಜೆಪಿ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಿದೆ. ಆದರೆ ಹಾಲಿ ಶಾಸಕರು ತಮ್ಮ ಕ್ಷೇತ್ರದಲ್ಲಿನ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳು, ಇರುವ ಸಮಸ್ಯೆಗಳ ಬಗ್ಗೆ ಯಾವುದೇ ಕರಡುಗಳು ಸರ್ಕಾರದ ಮುಂದಿಟ್ಟಿರುವ ನಿದರ್ಶನಗಳಿಲ್ಲ, ಆದರೂ ಕ್ಷೇತ್ರದಲ್ಲಿ ಮೊರಾರ್ಜಿ ವಸತಿ ಶಾಲಾ ಕಟ್ಟಡ ನಿರ್ಮಾಣ, ಅಗ್ನಿಶಾಮಕ ಠಾಣೆ, ಶಾಲಾಕಟ್ಟಡಗಳು ಮಂಜೂರಾಗಿವೆ. ಹರಿಜನ ಕಾಲೋನಿಗಳಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ, ಸುವರ್ಣ ಗ್ರಾಮಯೋಜನೆಯನ್ನು ಹಲವಾರು ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಚಾಲನೆಗೆ ತಂದಿರುವುದಲ್ಲದೆ, ತಾಲೂಕಿನ ಅಭಿವೃದ್ಧಿಗಾಗಿ ಒಟ್ಟು 300 ಕೋಟಿ ಅನುದಾನವನ್ನು ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದ್ದು,  ಯಾವುದೇ ತಾರತಮ್ಯ ಮನೋಭಾವವಿಲ್ಲ ಎಂಬುದನ್ನು ತೋರಿಸಿದೆ ಎಂದರು.
ಲೇವಡಿ: ಕ್ಷೇತ್ರದ ಹಾಲಿ ಹಾಗೂ ಮಾಜಿ ಶಾಸಕರು ಸಮಯಸಾಧಕತನವನ್ನು ಲೇವಡಿ ಮಾಡಿದ ಅವರು  ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮರೆತು ಜನರಿಂದ ಅಂತರವನ್ನು ಕಾಯ್ದುಕೊಂಡ ಹಾಲಿ ಶಾಸಕರು ಕೆಡಿಪಿ , ಬಗರ್ ಹುಕುಂ ಸಭೆಗಳನ್ನಾಗಲಿ ಸೂಕ್ತ ಸಮಯದಲ್ಲಿ ನಡೆಸದೆ ತಾಲೂಕಿಗೆ ಅನ್ಯಾಯ ಎಸಗಿದ್ದಾರೆ.
ವಿರೋಧ ಪಕ್ಷದ ಶಾಸಕನಾಗಿರುವುದರಿಂದ ಹಾಲಿ ಬಿಜೆಪಿ ಸರ್ಕಾರ ಕ್ಷೇತ್ರಕ್ಕೆ ಅನುದಾನ ನೀಡಲಿಲ್ಲವಾದ್ದರಿಂದ ಅಭಿವೃದ್ಧಿಯಲ್ಲಿ ಹಿನ್ನಡೆಯಾಯಿತು ಎಂದು ಹೇಳಿಕೊಳ್ಳುತ್ತಾ ಮತ್ತೊಮ್ಮೆ ಮತಯಾಚನೆಗೆ ಹೊರಟಿದ್ದಾರೆ. ಆದರೆ ರಾಜ್ಯದಲ್ಲಿ ವಿರೋಧಪಕ್ಷದ ಶಾಸಕರುಗಳಿರುವ ಇನ್ಯಾವುದೆ ಕ್ಷೇತ್ರಗಳು ಅಭಿವೃದ್ಧಿಯಾಗಿಲ್ಲವೆ ಎಂದು ಪ್ರಶ್ನಿಸಿದರು.  
ಮಾಜಿ ಶಾಸಕರೊಬ್ಬರ ನಡೆ ಜೆಟ್ಟಿ ಸೋತು ನೆಲ್ಲಕ್ಕೆ ಬಿದ್ದರೂ ತನ್ನ ಮೀಸೆ ಮಣ್ಣಾಗಲಿಲ್ಲ ಎನ್ನುವಂತಾಗಿದೆ ಎಂದು ವ್ಯಂಗ್ಯವಾಡಿದರು.
 ತಾಪಂ ಅಧ್ಯಕ್ಷ ಜಗದೀಶ್, ಮಾಜಿ  ಅಧ್ಯಕ್ಷ ಸೀತಾರಾಮಯ್ಯ, ಸದಸ್ಯ ಕೆಂಕೆರೆ ನವೀನ್, ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ವಕೀಲ ರಮೇಶ್ ಬಾಬು, ಮುಖಂಡರಾದ ಕೆ.ಕೆ. ಹನುಮಂತಪ್ಪ, ನಂದೀಹಳ್ಳಿ ಮಲ್ಲೇಶಯ್ಯ,  ಧನಂಜಯ, ದಯಾನಂದ, ರಾಮಯ್ಯ, ಪ್ರದೀಪ, ಗಣೇಶ ಇನ್ನಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement