ಎಚ್.ಬಿ.ನಂಜೇಗೌಡ ಮರಳಿ ಜೆಡಿಎಸ್ಗೆ
ತುರುವೇಕೆರೆ: ಕಾಂಗ್ರೆಸ್ನ ಮುಖಂಡ ಹಾಗೂ ಸಿಎಸ್ ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ನಂಜೇಗೌಡ ಕಾಂಗ್ರೆಸ್ಗೆ ಗುಡ್ ಬೈ ಹೇಳಿ ಪುನಃ ತಮ್ಮ ಮಾತೃ ಪಕ್ಷ ಜೆಡಿಎಸ್ಗೆ ಸೇರ್ಪಡೆಯಾಗಲಿದ್ದಾರೆ.
ಕಾಂಗ್ರೆಸ್ ಟಿಕೆಟ್ಗೆ ಪ್ರಬಲ ಆಕಾಂಕ್ಷಿಯಾಗಿದ್ದ ನಂಜೇಗೌಡರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ಗೆ ಗುಡ್ ಬೈ ಹೇಳುತ್ತಿದ್ದಾರೆ. ಇನ್ನು ಎರಡು ದಿನದೊಳಗೆ
ಜೆಡಿಎಸ್ಗೆ ಸೇರ್ಪಡೆಯಾಗುವುದಾಗಿ ಎಚ್.ಬಿ.ನಂಜೇಗೌಡ ತಿಳಿಸಿದರು. ಟಿಕೆಟ್ ದೊರಕದೇ ಬೇಸರಗೊಂಡಿದ್ದ ನಂಜೇಗೌಡರನ್ನು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ದೂರವಾಣಿ ಮೂಲಕ ಮಾತನಾಡಿಸಿ ತಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ನಲ್ಲಿ ಟಿಕೆಟ್ ನೀಡುವ ಸಂಬಂಧ ಭುಗಿಲೆದ್ದಿದ್ದ ಆಕ್ರೋಶದ ನಡುವೆಯೇ ಕಳೆದ ಆರೇಳು ದಿನಗಳ ಹಿಂದೆಯಷ್ಟೇ ನಂಜೇಗೌಡರು ಕಾಂಗ್ರೆಸ್ನ ಸಿಎಸ್ ಪುರ ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವ ಬೆದರಿಕೆ ಒಡ್ಡಿದ್ದರು.