ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತುರುವೇಕೆರೆ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಆಕ್ರೋಶ

Vishwanath S
Updated On : 15 Apr 2013, 11:00 am

ಕ.ಪ್ರ.ವಾರ್ತೆ  , ತುರುವೇಕೆರೆ  , ಏ.15
ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿ ಗೀತಾ ರಾಜಣ್ಣನವರನ್ನು ಕಣಕ್ಕಿಳಿಸಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ.ಎಲ್.ಗೋವಿಂದರಾಜು ಗೌಡರ ಅಭಿಮಾನಿಗಳಲ್ಲಿ ಆಕ್ರೋಶ ಮನೆ ಮಾಡಿದೆ.
  ಗೀತಾ ರಾಜಣ್ಣನವರ ಹೆಸರು ಪ್ರಕಟವಾಗುತ್ತಿದ್ದಂತೆ ಸಿಟ್ಟಿಗೆದ್ದ ಎಂ.ಎಲ್. ಗೋವಿಂದರಾಜು ಗೌಡರ ಅಭಿಮಾನಿಗಳು ಆಕ್ರೋಶ ಭರಿತರಾಗಿದ್ದಾರೆ. ಐದಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದು ಹಣ, ಸಮಯವನ್ನು ಮೀಸಲಿಟ್ಟಿದ್ದರೂ ಸಹ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳದೇ ಕೇವಲ ಚುನಾವಣೆ ವೇಳೆ ಮಾತ್ರ ಪಕ್ಷದಲ್ಲಿ ಕಾಣಿಸಿಕೊಂಡ ಗೀತಾ ರಾಜಣ್ಣನವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದು ಸರಿಯಾದ ಕ್ರಮವಲ್ಲ ಎಂದು ಎಂ.ಎಲ್.ಗೋವಿಂದರಾಜು ಗೌಡರ ಅಭಿಮಾನಿ ಬಳಗದ ಅಧ್ಯಕ್ಷ ಬಿ.ಟಿ.ನಂಜೇಗೌಡ ಆಕ್ಷೇಪಿಸಿದ್ದಾರೆ.
ಎಚ್ಚರಿಕೆ:  ಎಂ.ಎಲ್.ಗೋವಿಂದರಾಜು ಗೌಡರು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದು ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟನೆ ಮಾಡುವಲ್ಲಿ ಮಂಚೂಣಿಯಲ್ಲಿದ್ದರು. ಇವರನ್ನು ಕಡೆಗಣಿಸಿದ ಹೈಕಮಾಂಡ್ ಪಕ್ಷಕ್ಕೆ ಯಾವುದೇ ಸೇವೆ ಸಲ್ಲಿಸದವರಿಗೆ ಹಾಗೂ ಕ್ಷೇತ್ರದ ಜನತೆಯ ಪರಿಚಯವೇ ಇಲ್ಲದವರಿಗೆ ಟಿಕೆಟ್ ನೀಡಿರುವುದು ಎಲ್ಲರಿಗೂ ಅಸಮಾಧಾನ ತಂದಿದೆ ಎಂದು ಹೇಳಿದರು.
ಎಂ.ಎಲ್.ಗೋವಿಂದರಾಜು ಗೌಡರನ್ನು ಅವರ ಅಭಿಮಾನಿಗಳು ಹಾಗೂ ಪ್ರಾಮಾಣಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ದುಡಿಯುತ್ತಿರುವ ಕಾರ್ಯಕರ್ತರೆಲ್ಲಾ ಒಟ್ಟಾಗಿ ಗೋವಿಂದೇಗೌಡರನ್ನು ಬಂಡಾಯ ಕಾಂಗ್ರೆಸ್ ಪರವಾಗಿ ಚುನಾಣೆಯಲ್ಲಿ ನಿಲ್ಲಿಸುವ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯ ಎಚ್ಚರಿಕೆ: ತಮ್ಮ ನಾಯಕ ಎಂ.ಎಲ್.ಗೋವಿಂದರಾಜು ಗೌಡರು ಕ್ಷೇತ್ರಕ್ಕೆ ಮರಳಿದ ಕೂಡಲೇ ಚರ್ಚಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಆನಡಗು ಕುಮಾರ್ ತಿಳಿಸಿದ್ದಾರೆ. ಹಲವಾರು ಗ್ರಾಮ ಪಂಚಾಯ್ತಿ ಹಾಗೂ ಪಟ್ಟಣ ಪಂಚಾಯ್ತಿಯ ಎಲ್ಲಾ ಸದಸ್ಯರು ಹಾಗೂ ಮುಖಂಡರು ಕಾಂಗ್ರೆಸ್‌ಗೆ ವಿದಾಯ ಹೇಳುವುದು ಅನಿವಾರ್ಯವಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾದಿಹಳ್ಳಿಯ ಶಿವಣ್ಣ, ವೀರರಾಜು, ಶೌಕತ್ ಆಲಿ, ಯಾದವ ಸಂಘದ ಅಧ್ಯಕ್ಷ ರಾಜು, ಯುವ ಮುಖಂಡರಾದ ಗುರುದತ್, ಮಂಜುನಾಥ್ ಮೊದಲಾದವರು ಇದ್ದರು. ಸೋಮವಾರ ಮಧ್ಯಾಹ್ನ ಗೋವಿಂದೇಗೌಡ ಅಭಿಮಾನಿ ಬಳಗದ ಸದಸ್ಯರು ಬಹು ಸಮಯ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಕಿಡಿಕಾರಿ ಪ್ರತಿಭಟನೆ ಮಾಡಿದರು. ಕಾಂಗ್ರೆಸ್ ಹೈಕಮಾಂಡ್ ಗೋವಿಂದೇಗೌಡರಿಗೆ ಟಿಕೆಟ್ ನೀಡದಿದ್ದಲ್ಲಿ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement