ನಾಮಪತ್ರ ವಾಪಸ್ ಪಡೆಯಲ್ಲ: ಸಿವಿಎಂ
ತುಮಕೂರು: ನಾಮಪತ್ರ ವಾಪಸ್ ಪಡೆಯುವುದಿಲ್ಲ ಎಂದು ಬಿಜೆಪಿಯಲ್ಲಿದ್ದೇ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವ ಬಿಜೆಪಿ ಮುಖಂಡ ಸಿ.ವಿ. ಮಹದೇವಯ್ಯ ಸ್ಪಷ್ಟಪಡಿಸಿದರು.
ಅವರು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಸುಮಾರು 45 ವರ್ಷಗಳ ಕಾಲ ಜನಸಂಘ, ಬಿಜೆಪಿಯಲ್ಲಿ ಸೇವೆ ಮಾಡಿದೆ. ಆದರೆ ತಮಗೆ ಬಿಜೆಪಿಯಿಂದ ಸಾಸಿಸೆ ಕಾಳಿನಷ್ಟು ಸಹಾಯವಾಗಿಲ್ಲ ಎಂದರು. ತಾವು ಕೆಜೆಪಿಗೆ ಸೇರ್ಪಡೆಯಾಗಿಲ್ಲ ಎಂದು ತಿಳಿಸಿದರು.