ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿಜೆಪಿ ಅಭ್ಯರ್ಥಿ ಸುಮಿತ್ರಾದೇವಿ ನಾಮಪತ್ರ ಸಲ್ಲಿಕೆ

Mainashree
Updated On : 16 Apr 2013, 11:52 am

ಕ.ಪ್ರ.ವಾರ್ತೆ  ಮಧುಗಿರಿ  ಏ.16
ಮಧುಗಿರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ತಾವು ಗೆಲವು ಸಾಧಿಸಿದರೆ ತಾಲೂಕಿನ  ಸಮಗ್ರ ಅಭಿವೃದ್ಧಿಗೆ ಪ್ರಮಾಣಿಕವಾಗಿ ಶ್ರಮಿಸುವುದಾಗಿ ಬಿಜೆಪಿ ಅಭ್ಯರ್ಥಿ ಬಿ.ಸುಮಿತ್ರಾದೇವಿ  ತಿಳಿಸಿದರು.
ಸೋಮವಾರ ಮಧುಗಿರಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸದ ನಂತರ ಸುದ್ದಿಗಾರರ ಜೊತೆ  ಮಾತನಾಡಿ, ಇಲ್ಲಿವರೆಗೂ ಶಾಸಕರಾಗಿ ಆಯ್ಕೆಯಾದವರು ಕ್ಷೇತ್ರದತ್ತ ಗಮನ ಕೊಡದೇ ನಿರ್ಲಕ್ಷ್ಯ ಮನೋಭಾವ ತಾಳಿರುವುದೇ ಈ ಕ್ಷೇತ್ರ ಹಿಂದುಳಿಯಲು ಕಾರಣವಾಗಿದೆ ಎಂದ ಅವರು, ಹಾಗಾಗಿ ತಾವು ಮೇ 5 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ  ಗೆದ್ದು ಬಂದರೆ ಐತಿಹಾಸಿಕ  ಹಿನ್ನೆಲೆಯುಳ್ಳ ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡುವ ನಿಟ್ಟಿನಲ್ಲಿ ಶ್ರಮಿಸುವ ಜೊತೆಗೆ ನಂಜುಂಡಪ್ಪ ವರದಿ ಪ್ರಕಾರ  ಅತ್ಯಂತ ಹಿಂದುಳಿದ ಪ್ರದೇಶವಾದ ಈ ಕ್ಷೇತ್ರಕ್ಕೆ ಯಾವುದಾದರು ನದಿ ಮೂಲದಿಂದ ಶಾಶ್ವತ ನೀರಾವರಿ ಯೋಜನೆ ಜಾರಿ ಹಾಗೂ ಪ್ಲೋರೈಡ್ ಮುಕ್ತ ಶುದ್ಧ ಕುಡಿವ ನೀರು ಒದಗಿಸುತ್ತೇನೆ ಎಂದರು.
ಪ್ರತಿಯೊಬ್ಬ ಮತದಾರನ ಋಣ ತಿರೀಸಲು ಕಟಿಬದ್ಧವಾಗಿದ್ದೇನೆ ಎಂದರು.
ತಾ.ಅಧ್ಯಕ್ಷ ಬಿ.ಎನ್.ಲಕ್ಷ್ಮೀಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್,ವಿ.ಪದ್ಮಣ್ಣ, ಮಲ್ಲಿಕಾರ್ಜುನ ಸ್ವಾಮಿ,ಮುಖಂಡ ಬಿ.ಪಿ.ನಾರಾಯಣ್,ನಾಗೇಂದ್ರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement