ಬಿಜೆಪಿಯಿಂದ ನಾಗೇಶ್ ನಾಮಪತ್ರ
ತಿಪಟೂರು: ಹಾಲಿ ಶಾಸಕ, ಬಿಜೆಪಿ ಮುಖಂಡ ಬಿ.ಸಿ. ನಾಗೇಶ್ ತಿಪಟೂರು ವಿಧಾನಸಭಾ ಕ್ಷೇತ್ರದಿಂದ 2ನೇ ಬಾರಿಗೆ ಸ್ಪರ್ಧೆ ಬಯಸಿ ಸೋಮವಾರ ಬೆಂಬಲಿಗರ ಮೆರವಣಿಗೆಯೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಶಿವಸ್ವಾಮಿ, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಿಸಲೇಹಳ್ಳಿ ಜಗದೀಶ್, ಬಿಜೆಪಿ ಮುಖಂಡ ಸಿದ್ದಲಿಂಗಮೂರ್ತಿ, ಎಸಿಎಂಸಿ ಅಧ್ಯಕ್ಷ ಮಾದೀಹಳ್ಳಿ ಪ್ರಕಾಶ್, ಎಸಿಎಂಸಿ ಮಾಜಿ ಅಧ್ಯಕ್ಷ ದಿವಾಕರ್, ಜಿಲ್ಲಾ ಮುಖಂಡ ಆಯರಹಳ್ಳಿ ಶಂಕರಪ್ಪ, ತಾ.ಪಂ. ಮಾಜಿ ಅಧ್ಯಕ್ಷೆ ವಸಂತ ಗಂಗಾಧರ್, ಸಿಂಗ್ರಿದತ್ತಪ್ರಸಾದ್, ನಗರಸಭಾ ಸದಸ್ಯರಾದ ಪ್ರಸನ್ನಕುಮಾರ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.