ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸುದ್ದಿ ಸಂಕ್ಷೇಪ

Mainashree
Updated On : 16 Apr 2013, 10:54 am

ಜನಪರ ಕಾರ್ಯಕ್ರಮಅನುಷ್ಠಾನಕ್ಕೆ ಜೆಡಿಎಸ್ ಬೆಂಬಲಿಸಿ
ಪಾವಗಡ: ಜನಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಜೆಡಿಎಸ್ ಬೆಂಬಲಿಸಿ ಎಂದು ಹಿರಿಯ ಮುಖಂಡ ದವಡಬೆಟ್ಟ ಮಾರಪ್ಪ ಮನವಿ ಮಾಡಿದರು. ಅವರು ಮಂಗಳವಾರ ಗುಜ್ಜನಡು ಗ್ರಾಪಂ ವ್ಯಾಪ್ತಿಯ ದವಡಬೆಟ್ಟ ಗ್ರಾಮದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.  ಜೆಡಿಎಸ್‌ನಿಂದ ಮಾಜಿ ಶಾಸಕ ಕೆ.ಎಂ ತಿಮ್ಮರಾಯಪ್ಪ ಸ್ಪರ್ಧಿಸಿದ್ದು ಜನಪರ ಕಾಳಜಿ ಹಾಗೂ ಉತ್ತಮ ವ್ಯಕ್ತಿತ್ವವುಳ್ಳ ಕೆ.ಎಂ. ತಿಮ್ಮರಾಯಪ್ಪ ಅವರನ್ನು ಬೆಂಬಲಿಸುವ ಮೂಲಕ ಜೆಡಿಎಸ್‌ಗೆ ಮತ ನೀಡಿ ಎಂದು ಮನವಿ ಮಾಡಿದರು.  ದವಡಬೆಟ್ಟ ಮಾರಪ್ಪ, ತಾಪಂ ಸದಸ್ಯೆ ನರಸಮ್ಮ ಓಬಳಪತಿ ನೇತ್ವತ್ವದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ಪಳ್ಳಳಪ್ಪ,ಶ್ರೀ ನಂಜುಂಡೇಶ್ವರ ವಿದ್ಯಾ ಸಂಸ್ಥೆ ಕಾರ್ಯದರ್ಶಿ ತಾವರೇನಾಯಕ್, ಪೂಜಾರ್ ರಾಮಪ್ಪ, ರಾಮಕೃಷ್ಣಪ್ಪ ತಿಮ್ಮಪ್ಪ ಪಿ.ರಾಮಪ್ಪ, ಉದ್ದಪ್ಪ ಮುಂತಾದವರು ಕಾಂಗ್ರೆಸ್, ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾದರು.
13 ಕಾಂಗ್ರೆಸ್ಸಿಗರು ಜೆಡಿಎಸ್ ಸೇರ್ಪಡೆ
ಪಾವಗಡ: ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎ.ಶಂಕರರೆಡ್ಡಿ ಹಾಗೂ ಮುಖಂಡ ಪ್ರಸಾದ್‌ರೆಡ್ಡಿ ಸಮ್ಮುಖದಲ್ಲಿ ತಾಪಂ ಮಾಜಿ ಅಧ್ಯಕ್ಷೆ ತಾಡಮ್ಮ, ಹಿರಿಯ ಮುಖಂಡ ಬಸ್ ಮಾಲೀಕ ಮುದ್ದರಂಗನಾಯಕ ಸೇರಿದಂತೆ ರೊಪ್ಪ ಗ್ರಾಪಂನ 13 ಮಂದಿ ಸದಸ್ಯರು ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ. ಮುಖಂಡರಾದ ಎತ್ತಿನಹಳ್ಳಿ ಹರೀಶ್‌ರೆಡ್ಡಿ, ನರಸಿಂಹರೆಡ್ಡಿ, ಗೋಪಾಲರೆಡ್ಡಿ ಎಂ.ನಾಗರಾಜ್ ಸೇರಿದಂತೆ ರೊಪ್ಪ ಗ್ರಾಪಂ ಸದಸ್ಯರಾದ ವೈ.ಎಸ್ ಹನುಮಂತರಾಯಪ್ಪ, ಮುತ್ಯಾಲಪ್ಪ, ನವ್ಯ ರಾಮಕೃಷ್ಣಪ್ಪ, ನಾಗರಾಜ್, ಪೆದ್ದಯ್ಯ, ಹನುಮಂತರಾಯ, ಪಕ್ರದ್ದೀನ್, ಚಿಕ್ಕೀರಪ್ಪ ಮುಂತಾದವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಬಿಎಸ್‌ಆರ್‌ನಲ್ಲಿದ್ದ ರೊಪ್ಪ ಗ್ರಾಪಂ ಮಾಜಿ ಅಧ್ಯಕ್ಷ ಎಚ್.ರಾಮಾಂಜಿನಪ್ಪ ಜೆಡಿಎಸ್ ಕಡೆ ಒಲವು ವ್ಯಕ್ತಪಡಿಸಿದ್ದು ಅತೀ ಶೀಘ್ರದಲ್ಲಿಯೆ ಜೆಡಿಎಸ್ ಸೇರ್ಪಡೆಯಾಗುವ ಭರವಸೆ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಪರ ಪ್ರಚಾರ
ಪಾವಗಡ: ಪಟ್ಟಣದ ಪ್ರತಿಷ್ಠಿತ ಬಡವಾಣೆಗಳಲ್ಲಿ ಮಂಗಳವಾರ ಜೆಡಿಎಸ್ ಅಭ್ಯರ್ಥಿ ಕೆ.ಎಂ. ತಿಮ್ಮರಾಯಪ್ಪ ಹಾಗೂ ಮುಖಂಡರಾದ ಪಿ.ಎ.ಗೋವಿಂದರಾಜ್, ಆದರ್ಶನಗರದ ಮುತ್ತರಾಯಪ್ಪ ತಾಪಂ ಸದಸ್ಯೆ ನರಸಮ್ಮ ಓಬಳಪತಿ, ಯುವ ಮುಖಂಡ ಮಧು ಮುಂತಾದವರು ಚುನಾವಣಾ ಪ್ರಚಾರ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement