ಭಾರಿ ಮೆರವಣಿಗೆ ನಡುವೆ ಜಯಚಂದ್ರ ನಾಮಪತ್ರ ಸಲ್ಲಿಕೆ
ಕ.ಪ್ರ. ವಾರ್ತೆ ಶಿರಾ ಏ.17
ಶಾಸಕ ಟಿ.ಬಿ.ಜಯಚಂದ್ರ ಬುಧವಾರ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರು. ಬೆಂಬಲಿಗರ ಭಾರಿ ಮೆರವಣಿಗೆ ನಡುವೆ ಜಯಚಂದ್ರ ಅವರು ಪಟ್ಟಣದ ಮಲ್ಲಿಕ್ ರೆಹಾನ್ ದರ್ಗಾದಲ್ಲಿ ಪೂಜೆ ಸಲ್ಲಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಳ, ಮದ್ದಳೆ ನಡುವೆ ಜನರ ಹರ್ಷೋದ್ಗಾರದೊಂದಿಗೆ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಈ ಸಮಯದಲ್ಲಿ ಗುಳಿಗೇನಹಳ್ಳಿ ನಾಗರಾಜು, ಜಿ.ಪಂ. ಸದಸ್ಯ ಅರೇಹಳ್ಳಿ ರಮೇಶ್ ಎ.ಪಿ.ಎಂ.ಸಿ. ಅಧ್ಯಕ್ಷ ಶಶಿಧರ ಗೌಡ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣ, ಕಾಂಗ್ರೆಸ್ ವಕ್ತಾರ ಡಿ.ಸಿ.ಅಶೋಕ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಪ್ಯಾರು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂಗಾವರ ಮಾರಣ್ಣ, ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಶಿರಾ ನಗರ ಠಾಣಾ ಸಿ.ಪಿ.ಐ. ಪ್ರಹ್ಲಾದ್, ಗ್ರಾಮಾಂತರ ಸಿ.ಪಿ.ಐ. ಪಿ.ರವಿ ಮತ್ತು ಅರೆಸೇನಾ ಪಡೆ ಪಟ್ಟದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು.