ಕಾಂಗ್ರೆಸ್, ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆ
ಪಾವಗಡ: ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಮ್ಮ ನಾಗರಾಜ್ ಹಾಗೂ ತಾಪಂ ಮಾಜಿ ಅಧ್ಯಕ್ಷೆ ಯಶೋದಮ್ಮ ದೇವರಾಜ್ ಸೇರಿದಂತೆ ಮುಖಂಡರಾದ ಪ್ರಸಾದ್ ರೆಡ್ಡಿ ಹೊಸಕೋಟೆ ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ರವೀಂದ್ರನಾಥ್, ಆರ್ಯ ವೈಶ್ಯ ಸಂಘದ ಅಧ್ಯಕ್ಷ ಇ.ಜಿ.ಸತ್ಯನಾರಾಯಣ್, ಮಿಲ್ಲರ್ಸ್ ಸಂಘದ ಅಧ್ಯಕ್ಷ ಎ.ವಿ.ನಾಗರಾಜ್, ನಗರ ಕಾಂಗ್ರೆಸ್ ಮಾಜಿ ಮತ್ತಿತರರು ಕಾಂಗ್ರೆಸ್ ಹಾಗೂ ಬಿಜೆಪಿ ತೊರೆದು ಜೆಡಿಎಸ್ ಸೇರಿದರು. ಅಲ್ಲದೆ, ತಾಲೂಕಿನ ಮತ್ತಿತರೆ ಮುಖಂಡರಾದ ಪಿ.ವಿ.ನಾಗರಾಜ್, ಎನ್.ನಾಗಭೂಷಣ್ರೆಡ್ಡಿ, ಮಾಜಿ ಗ್ರಾಪಂ ಅಧ್ಯಕ್ಷ ನರಸಿಂಹಮೂರ್ತಿ ಜಿ.ವಿ.ಗೋವಿಂದರಾಜ್,ಜಿ.ಎ ಶ್ರೀನಿವಾಸಲು ಹಾಗೂ ಹಿರಿಯ ಮುಖಂಡ ಡಿ.ವಿ.ಅನಿಲ್ಕುಮಾರ್ ಮತ್ತು ತಾ,ಮೇಗಲಪಾಳ್ಯ ಗ್ರಾಮದ ಮುಖಂಡರಾದ ರೇಖಾನಾಯಕ್, ನಾರಾಯಣ್ನಾಯಕ್ ಸೇರಿದಂತೆ ನೂರಾರು ಕಾರ್ಯಕರ್ತರು ಕಾಂಗ್ರೆಸ್, ಬಿಜೆಪಿ ತೊರೆದು ಜೆಡಿಎಸ್ಗೆ ಸೇರ್ಪಡೆಯಾಗಿದ್ದಾರೆ.