ಕೆಂಕೆರೆ ಕಾಳಿಕಾಂಬ ಸಿಡಿ ಉತ್ಸವ
ಹುಳಿಯಾರು: ಹೋಬಳಿ ಕೆಂಕೆರೆ ಗ್ರಾಮದ ಗ್ರಾಮದೇವತೆ ಕಾಳಿಕಾಂಬದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ನೂರಾರು ಸಂಖ್ಯೆಯ ಭಕ್ತರ ಹರ್ಷೋದ್ಘಾರದೊಂದಿಗೆ ಸಿಡಿ ಉತ್ಸವ ವೈಭವಯುತವಾಗಿ ಜರುಗಿತು.
ಕಳೆದ 13 ರಿಂದ ನಡೆದ ಒಂದು ವಾರದ ಜಾತ್ರಾ ಮಹೋತ್ಸವದಲ್ಲಿ ಮೂರುದಿನ ಅಗ್ನಿಕೊಂಡಸೇವೆ, ದಮ್ಮಡಿಹಟ್ಟಿ ಹಾಗೂ ಕಂಪನಹಳ್ಳಿ ಗ್ರಾಮಸ್ಥರಿಂದ ಅಮ್ಮನವರ ಕಂಕಣ ಧಾರಣೆ, ಮದುವಣಗಿತ್ತಿ ಸೇವೆ, ಆರತಿಬಾನ ಕಾರ್ಯ, ಮಡಲಕ್ಕಿಸೇವೆ, ಕೆ.ಬಿ.ರಮೇಶಣ್ಣ ಹಾಗೂ ಅಂಗಡಿಕೊಡಪ್ಪ ಮತ್ತು ಗ್ರಾಮಸ್ಥರಿಂದ ಉಯ್ಯಾಲೆ ಉತ್ಸವ ನಡೆದವು.
ಶುಕ್ರವಾರ ಅದ್ಧೂರಿಯಾಗಿ ಸಿಡಿ ಉತ್ಸವ ನಡೆಯಿತು.
ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಿಂದ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.