ಕೋಲ್ಲಾಪುರದಮ್ಮ ಜಾತ್ರೆ 24 ರಿಂದ
ತಿಪಟೂರು: ತಾಲೂಕಿನ ನೊಣವಿನಕೆರೆ ಹೋಬಳಿ ಬಜಗೂರಿನಲ್ಲಿರುವ ಬಳ್ಳೆಕೆರೆ ಗ್ರಾಮದ ಕೆಂಪಮ್ಮದೇವಿ ಹಾಗೂ ಸೂಗೂರಿನ ಕೊಲ್ಲಾಪುರದಮ್ಮ ದೇವಿ ಜಾತ್ರಾ ಮಹೋತ್ಸವವು ಏ.24ರಿಂದ 28ರವರೆಗೆ ನಡೆಯಲಿದೆ.
24ರಂದು ಮೆರವಣಿಗೆ ಶಾಸ್ತ್ರ, ಅಂಕುರಾರ್ಪಣೆ, ದೇವತಾಕಾರ್ಯ. 25ರಂದು ಪಕ್ಷಿವಾಹನೋತ್ಸವ ಮತ್ತು ದೇವತ ಉತ್ಸವ. 26ರಂದು ಕೆಂಪಮ್ಮದೇವಿಯ ಮೂಲ ದೇವಾಲಯದಲ್ಲಿ ಪಂಚಾಮೃತಾಭಿಷೇಕ, ಪ್ರಸಾದ ವಿನಿಯೋಗ ಹಾಗೂ ಬಂಡಿ, ಬಾಯಿ ಬೀಗ. ಅಂದೇ ರಾತ್ರಿ 11ಗಂಟೆಗೆ ಅಮೋಘ ಮದ್ದಿನ ಪ್ರದರ್ಶನ ನಡೆಯಲಿದೆ. 27ರಂದು ಗಂಗಾಸ್ನಾನ, ಬ್ರಹ್ಮರಥೋತ್ಸವ. 28ರಂದು ಕೆಂಪಮ್ಮದೇವಿ ಹಾಗೂ ಕೊಲ್ಲಾಪುರದಮ್ಮ ದೇವರ ಉತ್ಸವ, ಸೋಮನ ಕುಣಿತ, ಸಿಡಿ ಓಕುಳಿ ಮತ್ತಿತರ ಪೂಜಾ ಕಾರ್ಯಕ್ರಮಗಳಿರುತ್ತವೆ.