ಪ್ರತಿಜ್ಞಾ ವಿಧಿ ಬೋಧನಾ ಸಮಾರಂಭ
ಶಿರಾ: ಪಟ್ಟಣದ ರಾಮಕೃಷ್ಣ ವಿದ್ಯಾಸಂಸ್ಥೆ ವತಿಯಿಂದ ಸೇಂಟ್ ಮದರ್ ತೆರೆಸಾ ನರ್ಸಿಂಗ್ ಸ್ಕೂಲ್ನಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಜ್ಯೋತಿ ಬೆಳಗಿಸುವ ಹಾಗೂ ಪ್ರತಿಜ್ಞಾ ವಿಧಿ ಬೋಧನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಸಮಾರಂಭವನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಅಜ್ಗರಾ ಬೇಗ್ ಉದ್ಘಾಟಿಸಿ ಮಾತನಾಡಿ ದೇಶದ ಜನರ ಆರೋಗ್ಯ ಕಾಪಾಡುವಲ್ಲಿ ಶುಶ್ರುಕಿಯರ ಪಾತ್ರ ಹಿರಿದಾದುದು ಹಾಗೂ ಇದು ಮಾತೃ ಸಮಾನ ಕಾರ್ಯವಾಗಿದೆ ಎಂದರು.
ಗ್ರಾಮಾಂತರ ಸಿ.ಪಿ.ಐ. ಪಿ.ರವಿ, ಮುಖ್ಯ ಅತಿಥಿಗಳಾಗಿ ಮಾತನಾಡಿ ಶುಶ್ರುಕಿಯರ ಸೇವನೆಯನ್ನು ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ. ಅದನ್ನು ಆಸ್ಪತ್ರೆಯಿಂದ ಹೊರ ಹೋಗುವ ರೋಗಿಗಳ ಕಣ್ಣಿನಲ್ಲಿ ಕಾಣಬಹುದು ಎಂದರು.
ಪ್ರೊ. ಕೆ.ಹನುಮಂತರಾಯಪ್ಪ, ಕಾಲೇಜಿನ ಕಾರ್ಯದರ್ಶಿ ಡಾ.ಕೆ.ರಾಮಕೃಷ್ಣ, ನರ್ಸಿಂಗ್ ಸುಪರಿಂಟೆಂಡ್ ರಂಗಮ್ಮ, ಕ.ಸಾ.ಪ. ಅಧ್ಯಕ್ಷ ನರೇಶ್ ಬಾಬು, ಆರ್.ವಿ.ಪುಟ್ಟಕಾಮಣ್ಣ, ಶೈಲರಾಮಕೃಷ್ಣ, ಎಸ್.ಎನ್.ಕೃಷ್ಣಯ್ಯ, ರಮೇಶ್ಚಂದ್ರ ಮತ್ತಿತರರು ಹಾಜರಿದ್ದರು.