ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿಜೃಂಭಣೆಯ ರಾಮನವಮಿ ಆಚರಣೆ

Mainashree
Updated On : 19 Apr 2013, 11:34 am

ಹುಳಿಯಾರು: ರಾಮನವಮಿ ಅಂಗವಾಗಿ ಪಟ್ಟಣದ ಮನೆಮನೆಗಳಲ್ಲಿ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಶ್ರೀರಾಮನ ಭಜನೆ ಪಠಿಸುತ್ತಾ ಶ್ರೀರಾಮನನ್ನು ಆರಾಧಸಿ, ನಂತರ ಕೋಸಂಬರಿ, ಬೇಲದ ಹಣ್ಣಿನ ಪಾನಕ, ಮಜ್ಜಿಗೆ, ಕಡಲೆಕಾಲು ಹುಸಲಿಯ ನೈವೇದ್ಯ ಸಂತರ್ಪಣೆ ಮಾಡಿ, ಸಾರ್ವಜನಿಕರಿಗೆ ವಿತರಿಸುವ ಮೂಲಕ ರಾಮನವಮಿಯನ್ನು ಶ್ರದ್ಧಾಭಕ್ತಿಯಿಂದ ಶುಕ್ರವಾರ ಆಚರಿಸಲಾಯಿತು.
ಪಟ್ಟಣದ ಅಂಜನೇಯಸ್ವಾಮಿ ಸನ್ನಿಧಿ, ಅನಂತಶಯನ ರಂಗನಾಥಸ್ವಾಮಿ ಸನ್ನಿಧಿ, ಗಾಂಧಿಪೇಟೆಯ ಶನೇಶ್ವರಸ್ವಾಮಿ ದೇವಾಲಯ, ಕಾಳಿಕಾಂಭ ದೇವಾಲಯ, ಗ್ರಾಮದೇವತೆ ಹುಳಿಯಾರಮ್ಮನ ದೇವಾಲಯದಲ್ಲಿಶ್ರೀರಾಮಚಂದ್ರ ಹುಟ್ಟಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯ ದಿನದ ಅಂಗವಾಗಿ ಶುಕ್ರವಾರ ಬೆಳಗಿನಿಂದಲೇ ವಿಶೇಷ ಅರ್ಚನೆ, ಪೂಜೆ ಕೈಂಕರ್ಯ ನಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement