ಸ್ಕೂಟರ್ ಡಿಕ್ಕಿ; ಮಹಿಳೆ ಸಾವು
ಮಳವಳ್ಳಿ: ವೇಗವಾಗಿ ಬರುತ್ತಿದ್ದ ಸ್ಕೂಟರ್ವೊಂದು ಪಾದಚಾರಿ ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದ ಆಕೆ ಸಾವನ್ನಪ್ಪಿರುವ ದುರ್ಘಟನೆ ಗುರುವಾರ ಸಂಜೆ ಪಟ್ಟಣದಲ್ಲಿ ಜರುಗಿದೆ.
ಪಟ್ಟಣದ ಸುಲ್ತಾನ್ ರಸ್ತೆಯ ವಾಸಿ ಕೃಷ್ಣಪ್ಪ ಎಂಬವರ ಪತ್ನಿ ಸರೋಜಮ್ಮ (55) ಎಂಬವರೇ ಮೃತಪಟ್ಟವರಾಗಿದ್ದು, ಗುರುವಾರ ಸಾಯಂಕಾಲ 6ರ ಸಮಯದಲ್ಲಿ ಸುಲ್ತಾನ್ ರಸ್ತೆಯಲ್ಲಿರುವ ಚರ್ಚ್ನಲ್ಲಿ ಪ್ರಾರ್ಥನೆ ಮುಗಿಸಿಕೊಂಡು ವಾಪಸ್ಸು ಮನೆಗೆ ಹೋಗಲೆಂದು ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತಿದ್ದಾಗ ಹಿಟ್ಟನಹಳ್ಳಿ ಕಡೆಯಿಂದ ವೇಗವಾಗಿ ಬರುತ್ತಿದ್ದ ಸ್ಕೂಟಿ ಸ್ಕೂಟರ್ ಸರೋಜಮ್ಮ ಅವರಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.