ಗುಬ್ಬಿ: 14 ಮಂದಿ ಕಣದಲ್ಲಿ
ಗುಬ್ಬಿ: ಗುಬ್ಬಿ ವಿಧಾನಸಭಾ ಚುನಾವಣೆ ಸ್ವರ್ಧಾಕಣದಲ್ಲಿ 14 ಅಭ್ಯರ್ಥಿಗಳು ಉಳಿದು ಪಕ್ಷೇತರ 3 ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ರಾಷ್ಟೀಯ, ಪ್ರಾದೇಶಿಕ ಪಕ್ಷಗಳಿಂದ 7 ಅಭ್ಯರ್ಥಿಗಳಾದ ಎಸ್.ಆರ್.ಶ್ರೀನಿವಾಸ್ (ಜೆಡಿ ಎಸ್), ಜಿ.ಎನ್.ಬೆಟ್ಟಸ್ವಾಮಿ (ಕೆಜೆಪಿ), ಹೊನ್ನಗಿರಿಗೌಡ (ಕಾಂಗ್ರೇಸ್), ಎಸ್.ಆರ್. ನಟರಾಜು (ಬಿ.ಜೆ.ಪಿ) ಹೆಚ್.ಎಂ.ಉಮೇಶ್ (ಜೆಡಿಯು), ಶಿವಣ್ಣ (ಬಿಎಸ್‌ಪಿ), ಜಿ.ಕೆ.ಹುಚ್ಚೇಗೌಡ(ಬಿಎಸ್‌ರ್) ಕಣದಲ್ಲುಳಿದರೆ, ಎ.ಆರ್.ಶ್ರೀನಿವಾಸಮೂರ್ತಿ, ಸಿ.ಪಿ. ವಿಜಯಕುಮಾರ್, ಪಿ.ಸಿ. ಲೋಕೇಶ್, ಬಿ.ಆರ್. ರಜನಿಕಾಂತ್, ಎಚ್.ಎನ್. ಗಿರಿಯಪ್ಪ, ಬೆಟ್ಟಸ್ವಾಮಿ, ಎಚ್.ಎನ್. ಮಲ್ಲಿಕಾರ್ಜುನಯ್ಯ ಪಕ್ಷೇತರರಾಗಿ ಕಣದಲ್ಲಿದ್ದಾರೆ. ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಶಿವರಾಜು, ಎಸ್.ಬಿ. ಮಹದೇವಯ್ಯ, ಟಿ.ಎಚ್. ಕುಮಾರ್ ನಾಮಪತ್ರ ಹಿಂಪಡೆದಿದ್ದಾರೆ.