ಗ್ರಾಪಂ ಸದಸ್ಯರ ಕೆಜೆಪಿ ಸೇರ್ಪಡೆ
ತುರುವೇಕೆರೆ: ತಾಲೂಕಿನ ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಾಯ್ತಿಯ ಹಿರಿಯ ಸದಸ್ಯ ಕಾಂಗ್ರೆಸ್‌ನ ಕಟ್ಟಾ ಬೆಂಬಲಿಗ ದೊಡ್ಡೇರಿ ರಾಜಣ್ಣ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ನ 4, ಜೆಡಿಎಸ್ ಬೆಂಬಲಿಗ 5 ಸದಸ್ಯರು ಸಾಮೂಹಿಕವಾಗಿ ಕೆಜೆಪಿಗೆ ಸೇರ್ಪಡೆಗೊಂಡರು.
ಕಾಂಗ್ರೆಸ್ ನಲ್ಲಿ ಸೂಕ್ತ ಅಭ್ಯರ್ಥಿಯ ನೇಮಕ ಮಾಡದಿರುವುದು ಹಾಗೂ ಸ್ಥಳೀಯ ಶಾಸಕರ ಜನವಿರೋಧಿ ನಿಲವು ವಿರೋಧಿಸಿ ತಾವುಗಳೆಲ್ಲರೂ ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಕೆಜೆಪಿಗೆ ಸೇರ್ಪಡೆಯಾಗುತ್ತಿರುವುದಾಗಿ ಸದಸ್ಯರುಗಳು ತಿಳಿಸಿದರು. ಶೆಟ್ಟಗೊಂಡನಹಳ್ಳಿಯ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ವಸಂತಾ ಚಂದ್ರಶೇಖರ್, ಸದಸ್ಯರಾದ ಜಯ್ಯಮ್ಮ, ಕೃಷ್ಣಮೂರ್ತಿ, ಸೀಗೇಹಳ್ಳಿ ವಿಎಸ್‌ಎಸ್‌ಎನ್ ನಿರ್ದೇಶಕರಾದ ರಾಜು, ವಜೀರ್ ಸಾಬ್, ಹುಚ್ಚಮ್ಮ, ವಡವನಘಟ್ಟ ಗ್ರಾಮ ಪಂಚಾಯ್ತಿ ಸದಸ್ಯ ಗಂಗಾಧರ್, ಬಸವರಾಜು, ಲಕ್ಕಮ್ಮ, ವಿಜಯಕುಮಾರ್, ಆರ್.ಎಸ್.ಪಾಳ್ಯದ ಯೂನಸ್, ಇಟ್ಟಿಗೇಹಳ್ಳಿ ಮಂಜುನಾಥ್, ಅಂಗಡಿಗೆರೆ ಶ್ರೀನಿವಾಸ್, ಕೆಂಪಯ್ಯ, ಹನುಮಂತಯ್ಯ, ಪಟೇಲ್ ದಿವಾಕರ್, ಪುಟ್ಟಣ್ಣ, ಮೂರ್ತಿ ಮೊದಲಾದವರು ಕೆಜೆಪಿ ಗೆ ಸೇರ್ಪಡೆಯಾದರು.
ಕೆಜೆಪಿ ಅಭ್ಯರ್ಥಿ ಮಸಾಲಾ ಜಯರಾಂ, ಮುಖಂಡ ಎಂ.ಡಿ.ಮೂರ್ತಿ, ವಕ್ತಾರ ಮುದ್ದೇಗೌಡ, ಯುವ ಮುಖಂಡ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯ ಅರಳಹಳ್ಳಿ ಮಹಲಿಂಗಯ್ಯ, ಮಾಯಸಂದ್ರ ಹೋಬಳಿ ಕೆಜೆಪಿ ಮಹಿಳಾ ಅಧ್ಯಕ್ಷೆ ರತ್ನಮ್ಮ, ಮಾಯಸಂದ್ರ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಕೆ.ಚಂದ್ರಪ್ರಭು, ಹೊಣಕೆರೆ ಸೋಮೇಗೌಡ, ರಾಜ್ಯ ಪರಿಷತ್ ಸದಸ್ಯ ವಿ.ಬಿ.ಸುರೇಶ್, ಕಾಳಂಜೀಹಳ್ಳಿ ಸೋಮಶೇಖರ್, ತುರುವೇಕೆರೆ ಪಟ್ಟಣ ಅಧ್ಯಕ್ಷ ಶಂಕರಪ್ಪ, ಸಿ ಎಸ್ ಪುರ ಕುಮಾರ್ ಮೊದಲಾದ ಮುಖಂಡರು ಕೆಜೆಪಿಗೆ ಸೇರ್ಪಡೆಯಾದ ಪ್ರಮುಖರನ್ನು ಸ್ವಾಗತಿಸಿದರು.