ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಛಲದಿಂದ ದುಡಿಯುವ ಗುಣ ನಮ್ಮದು

Mainashree
Updated On : 20 Apr 2013, 10:43 am

ಕ.ಪ್ರ.ವಾರ್ತೆ, ತುಮಕೂರು, ಏ.20
ಇಂದು ವಾಲ್ಮೀಕಿ ಸಮಾಜದ ಜನತೆಯನ್ನು ಕಾಲುಹಿಡಿದು ಎಳೆಯುವ ಕೆಲಸಗಳು ನಡೆಯತ್ತಲೇ ಬಂದಿವೆ. ನಾವು ಮೊದಲಿನಿಂದಲೂ ನಿಷ್ಠಾವಂತರಾಗಿದ್ದೇವೆ. ಬೇರೆಯವರ ಹಣಕ್ಕಾಗಲಿ, ಆಸ್ತಿಗಾಗಲಿ ಎಂದಿಗೂ ಆಸೆ ಪಟ್ಟವರಲ್ಲ. ಏನೇ ಕಷ್ಟ ಬಂದರೂ ಶ್ರಮವಹಿಸಿ ದುಡಿಯುವ ಗುಣ ನಮ್ಮದಾಗಿದೆ ಎಂದು ಜಯರಾಮನ್ ಅವರು ತಿಳಿಸಿದರು.
ಅವರು ಸಮೀಪದ ಅರಳೀಮರ ಪಾಳ್ಯದ ದೊಡ್ಡಾಲದಮರ ಗ್ರಾಮ ಸಂಘದ ಆಶ್ರಯದಲ್ಲಿ ನಡೆದ ವಿಶೇಷ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾಭ್ಯಾಸದ ಕಡೆ ಯುವಕರು ಹೆಚ್ಚು ಹೊತ್ತು ನೀಡಿ ಉನ್ನತ ಸ್ಥಾನಗಳಲ್ಲಿ ಗುರುತಿಸಿಕೊಂಡರೆ ನಾವು ಸಹ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಮದಕರಿ ನಾಯಕ ಸೇನೆ ತುಮಕೂರು ಜಿಲ್ಲೆಯಲ್ಲಿ ಸುಮಾರು 420 ಶಾಖೆಗಳನ್ನು ತೆರೆದಿದ್ದೇವೆ. ಪ್ರತಿಯೊಂದು ತಾಲೂಕಿನಲ್ಲಿ ನಮ್ಮ ಪ್ರತಿನಿಧಿಗಳನ್ನು ಆಯ್ಕೆಮಾಡಿ ಒಂದೇ ವೇದಿಕೆಯಲ್ಲಿ ಮುನ್ನುಗ್ಗಬೇಕು ಎಂದು ಜಿಲ್ಲಾಧ್ಯಕ್ಷ ರಾಜಣ್ಣ ಅವರು ತಿಳಿಸಿದರು.
ನಗರದ ಅಧ್ಯಕ್ಷರಾದ ಸಂಜಯ ನಾಯಕ್, ಉಪಾಧ್ಯಕ್ಷರಾದ ದೊಡ್ಡಯ್ಯ, ಹಾಗೂ ಸಂಘದ ಪದಾಧಿಕಾರಿಗಳಾದ ನಾಗೇಂದ್ರ, ಮಂಜುನಾಥ್, ವಿಜಯಕುಮಾರ್, ಲೋಕೇಶ್ ಸೇರಿದಂತೆ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement