ಬೇಟೆರಾಯ ಸ್ವಾಮಿಯ ಬ್ರಹ್ಮ ರಥೋತ್ಸವ
ಗುಬ್ಬಿ : ಪಟ್ಟಣದ ಇತಿಹಾಸ ಪ್ರಸಿದ್ಧ ಬೇಟೆರಾಯ ಸ್ವಾಮಿಯ ಬ್ರಹ್ಮ ರಥೋತ್ಸವ ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಿತು. ಅಪಾರ ಭಕ್ತ ಸಮೂಹ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.
ಈ ಬ್ರಹ್ಮ ರಥೋತ್ಸವದ ಅಂಗವಾಗಿ ವಿಶೇಷ ಪೂಜೆ, ಅಲಂಕಾರ, ಅಭಿಷೇಕ, ಪಾನಕ, ಪಣ್ಯಾರ ವ್ಯವಸ್ಥೆ ಮಾಡಿದ ನಂತರ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಿದ್ದು, ಒಟ್ಟಾರೆ ಪಟ್ಟಣದಲ್ಲೆಡೆ ಶ್ರೀ ರಾಮನವಮಿ ಕಾರ್ಯಕ್ರಮ ವಿಜೃಭಣೆಯಿಂದ ಜರುಗಿತು.