ಕೆಜೆಪಿ ರಾಜ್ಯ ಉಪಾಧ್ಯಕ್ಷ ಕಾಂಗ್ರೆಸ್ಗೆ ಸೇರ್ಪಡೆ
ತುಮಕೂರು: ಕೆಜೆಪಿ ರಾಜ್ಯ ಉಪಾಧ್ಯಕ್ಷ ನಿಜಾಂ ಆಲಿ ಕೆಜೆಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಆದೇಶದಂತೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಷಫಿ ಅಹಮದ್ ಸಮ್ಮುಖದಲ್ಲಿ ನಿಜಾಂ ಆಲಿ ಪಕ್ಷಕ್ಕೆ ಸೇರ್ಪಡೆಯಾದರು. ಕೆಜೆಪಿಯಲ್ಲಿ ಮುಸ್ಲಿಮರನ್ನು ಕಡೆಗಣಿಸಲಾಗುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ 30 ಕ್ಕೂ ಹೆಚ್ಚು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವಂತೆ ಕೇಳಿದ್ದೆ. ಆದರೆ ಟಿಕೆಟ್ ನಿರಾಕರಿಸಲಾಯಿತು. ತಾವು ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರಕ್ಕೆ ಕೆಜೆಪಿಯಿಂದ ಆಕಾಂಕ್ಷಿಯಾಗಿದ್ದೆ. ತಮಗೂ ಟಿಕೆಟ್ ನೀಡಲಿಲ್ಲ. ತಾವು ತಮಗಾಗಿ ಬಿಜೆಪಿಗೆ ಹೋಗಿರಲಿಲ್ಲ. ಜನಾಂಗದ ಹಿತದೃಷ್ಟಿಯಿಂದ ಹೋಗಿದ್ದೆ. ಈಗಲೂ ಅಷ್ಟೇ ಜನಾಂಗದ ಹಿತದೃಷ್ಟಿಯಿಂದಲೇ ಕಾಂಗ್ರೆಸ್ಗೆ ಬಂದಿದ್ದೇನೆ. ಅಲ್ಪಸಂಖ್ಯಾತರಿಗಾಗಿ ಕೆಲಸ ಮಾಡುತ್ತಲೇ ಬಂದಿದ್ದೇನೆ. ಮುಸ್ಲಿಮರಿಗಾಗಿ ಕೆಲಸ ಮಾಡುವ ಸವಾಲು ಇದ್ದೇ ಇದೆ. ಈ ಹಿಂದೆ ಬಿಜೆಪಿಯವರು ಮನೆಗೆ ಬಂದು ಕರೆದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಜನಾಂಗಕ್ಕೆ ಸಹಾಯವಾಗಬಹುದು ಅಂತ ಹೋದೆ. ಬಿಜೆಪಿಯವರಿಗೂ ಮುಸ್ಲಿಂ ಮುಖಂಡರು ಬೇಕಿತ್ತು ಎಂದರು.