ಯಾದವರು ಪರಮೇಶ್ವರ್ ವಿರೋಧಿಯಲ್ಲ
ತುಮಕೂರು: ಜಿಲ್ಲೆಯ ಯಾದವ ಜನಾಂಗ ಡಾ. ಜಿ. ಪರಮೇಶ್ವರವರ ವಿರೋಧಿಯಲ್ಲ ಎಂದು ರಾಜ್ಯ ಯಾದವ ರಾಜಕೀಯ ಜಾಗೃತಿ ಯುವ ವೇದಿಕೆ ಅಧ್ಯಕ್ಷ ಎಸ್. ಚಿಕ್ಕರಾಜು ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಟಿ. ಗೋವಿಂದರಾಜು ತಿಳಿಸಿದ್ದಾರೆ.
ಪರಮೇಶ್ವರ್ ಅವರು ಮಧುಗಿರಿ ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಯಾದವ ಜನಾಂಗಕ್ಕೆ ಗುರುತರವಾದ ಸೇವೆ ಮಾಡಿದ್ದು ಯಾದವ ವಿದ್ಯಾರ್ಥಿ ನಿಲಯಕ್ಕೆ 5 ಲಕ್ಷ ಅನುದಾನ ನೀಡಿದ್ದು ಕ್ಷೇತ್ರದ ಯಾದವ ಯುವಕರ ಬೆಳವಣಿಗೆಗೆ ಪೂರಕವಾಗಿದೆ ಎಂದು ಬಣ , ಿಸಿದ್ದಾರೆ.
ರಾಜ್ಯದಲ್ಲಿ ಮೂವರು ಯಾದವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೇ ಚಿಕ್ಕನಾಯಕನಹಳ್ಳಿಯಲ್ಲಿ ಸತೀಶ್ ಅವರನ್ನು ಗುಬ್ಬಿಯಲ್ಲಿ ಬೆಟ್ಟಸ್ವಾಮಿ ಅರನ್ನು ಗೆಲ್ಲಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಯುವ ವೇದಿಕೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಹಿತೇಂದ್ರ ಗೋದ್ರಾ ವೀಕ್ಷಕ
ಗುಬ್ಬಿ: ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಹಿತೇಂದ್ರ ಗೋದ್ರಾ ಅವರನ್ನು ವೀಕ್ಷಕರಾಗಿ (ವೆಚ್ಚ) ಕೇಂದ್ರ ಚುನಾವಣಾ ಆಯೋಗ ನಿಯೋಜಿಸಿದೆ. ವೆಚ್ಚಕ್ಕೆ ಸಂಬಂಧಿಸಿದ ದೂರು ನೀಡುವರು ಹಾಗೂ ಖುದ್ದು ಭೇಟಿ ಮಾಡುವರು ಪ್ರತಿ ದಿನ ಗುಬ್ಬಿಯ ಪರಿವೀಕ್ಷಣಾ ಮಂದಿರದಲ್ಲಿ ಬೆ.11 ರಿಂದ 12 ರವರೆಗೆ ಭೇಟಿ ಮಾಡಬಹುದು ಹಾಗೂ ಮೊಬೈಲ್ ನಂ.827731093, ಫ್ಯಾಕ್ಸ್ ನಂ. 0816-2280384ಗೆ ಸಾರ್ವಜನಿಕರು ದೂರು ನೀಡಬಹುದಾಗಿದೆ.