ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಾಜ್ಯದ ರೈತರ ಹಿತ ಕಾಪಾಡುವಲ್ಲಿ ಬಿಜೆಪಿ ವಿಫಲ

Vishwanath S
Updated On : 21 Apr 2013, 11:57 am

ಕ.ಪ್ರ. ವಾರ್ತೆ   ,  ಹುಳಿಯಾರು   ,  ಏ.21
ರೈತನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ ಆಡಳಿತ ನಡೆಸಲು ಮುಂದಾದ ಬಿಜೆಪಿ ಸರ್ಕಾರ ರಾಜ್ಯದ ರೈತರ ಹಿತ ಕಾಪಾಡುವುದನ್ನು ಮರೆತು ತಮ್ಮದೇ ಆದ ಆಡಳಿತವನ್ನು ನಡೆಸುತ್ತಾ ಹಲವಾರು ಹಗರಣಗಳಲ್ಲಿ ಸಿಲುಕುವ ಮೂಲಕ ರಾಜ್ಯವನ್ನು ಕೊಳ್ಳೆ ಹೊಡೆಯುವ ಕಾರ್ಯದಲ್ಲಿ ತೊಡಗಿದೆ. ಈಗ ಇದಕ್ಕೆಲ್ಲಾ ಕಡಿವಾಣ ಹಾಕಿ ರಾಜ್ಯದಲ್ಲಿ ಬದಲಾವಣೇ ತರುವ ನಿಟ್ಟಿನಲ್ಲಿ ಈಗಿನ ಚುನಾವಣೆಯಲ್ಲಿ ಮತದಾರ ಎಚ್ಚೆತ್ತುಕೊಂಡು ರಾಜ್ಯದಲ್ಲಿ ಜೆಡಿಎಸ್ ಆಯ್ಕೆ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ ಮಾಡಿದರು.
 ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಮೊದಲ ದಿನವೇ ರೈತರ ಸಂಪೂರ  ,  ಸಾಲ ಮನ್ನಾ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.
ಚಿಕ್ಕನಾಯಕನಹಳ್ಳಿ ಕ್ಷೇತ್ರದ ಅಭ್ಯರ್ಥಿ ಸಿ.ಬಿ.ಸುರೇಶ್‌ಬಾಬು  ಪರ ಪ್ರಚಾರಕ್ಕಾಗಿ ಹುಳಿಯಾರಿಗೆ  ಆಗಮಿಸಿದ್ದ ಅವರು ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.
 ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ, ಅಲ್ಲಲ್ಲೆ ಗ್ರಾಮವಾಸ್ತವ್ಯ ಮಾಡುವ  ಮೂಲಕ ಹರಿಜನ, ದಲಿತ ಎಂದು ಜಾತಿತಾರತಮ್ಯ ಮಾಡದೇ ಎಲ್ಲಾ ಜನಾಂಗದವರು ಒಂದೇ ಎಂದು ಭಾವಿಸಿ ಅವರ ಸಂಕಷ್ಟವನ್ನು ತಿಳಿದಿದ್ದೇನೆ. ಆಗ ನನ್ನ  ಗ್ರಾಮವಾಸ್ತವ್ಯದ ಬಗ್ಗೆ ಲೇವಡಿ ಮಾಡಿದ ಕಾಂಗ್ರೆಸಿಗರು ಇದೇ  ಕಾರ್ಯವನ್ನೇ  ರಾಹುಲ್ ಗಾಂಧಿಯವರ ಮೂಲಕ ಮಾಡಿಸಿ  ನಾಟಕೀಯವಾಗಿ ಜನರಲ್ಲಿ ಮತಯಾಚಿಸುತ್ತಿದ್ದಾರೆ. ಅಲ್ಲದೆ ಕೇಂದ್ರದ ಕಾಂಗ್ರೆಸ್ ಸರ್ಕಾರ ನಮ್ಮ ರಾಜ್ಯದಿಂದ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಿಸುವ ಮೂಲಕ ತಮಿಳುನಾಡಿಗೆ ಅನುಕೂಲ ಮಾಡಿಕೊಟ್ಟು, ಕರ್ನಾಟಕ ರಾಜ್ಯವನ್ನು ಕಡೆಗಣಿಸಿದೆ. ಇಂತಹ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ರಾಜ್ಯದ ಮುಂದಿನ ಸ್ಥಿತಿಯನ್ನು ಯಾವ ಮಟ್ಟಕ್ಕೆ ಕೊಂಡೊಯ್ಯುತ್ತಾರೆ ಎಂಬುದನ್ನು ಮತದಾರರು ಪರಾಮರ್ಶಿಸಬೇಕಿದೆ ಎಂದರು.
ನೆಪಮಾತ್ರಕ್ಕೆ ಅಲ್ಲ: ಜೆಡಿಎಸ್ ತನ್ನ ಪ್ರಣಾಳಿಕೆಯನ್ನು ನೆಪ ಮಾತ್ರಕ್ಕೆ ಬಿಡುಗಡೆ ಮಾಡಿಲ್ಲ. ರಾಜ್ಯದ ಹಿತವನ್ನು ಮನಗಂಡು ಹತ್ತಾರು ಯೋಜನೆಗಳನ್ನು ಒಳಗೊಂಡಂತೆ, ಅದರಲ್ಲೂ ಹೆಚ್ಚಾಗಿ ರೈತರಿಗೆ ನೆರವಾಗುವಂತಹ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದ್ದು, ಅಂಗವಿಕಲರಿಗೆ, ವಿಧವೆಯರಿಗೆ, ವಯೋವೃದ್ಧರಿಗೆ ಎರಡು ಸಾವಿರದವರೆಗೆ ಮಾಸಾಶನ ನೀಡುವುದಾಗಿದ್ದು, ಎಪ್ಪತ್ತುವರ್ಷ ಮೇಲ್ಪಟ್ಟವರಿಗೆ ತಿಂಗಳಿಗೆ ಐದುಸಾವಿರ ನೀಡುವ ಮೂಲಕ ಅವರು ತಮ್ಮ ವೃದ್ಧಾಪ್ಯದಲ್ಲಿ ಯಾರ ಹಂಗಿಲ್ಲದೆ ಜೀವನ ನಡೆಸುವಂತೆ ಮಾಡುವ ಗುರಿ ಹೊಂದಿದೆ. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಮುಗಿಸಿ ಕೆಲಸವಿಲ್ಲದೆ ಇರುವವರಿಗೆ ತಿಂಗಳಿಗೆ ಹತ್ತುಸಾವಿರ ಸಂಬಳ ದೊರೆಯುವಂತಹ ಉದ್ಯೋಗಗಳನ್ನು ಕಲ್ಪಿಸಿ ಕೊಡುವ ನಿಲವು ಹೊಂದಿರುವುದಾಗಿ ತಿಳಿಸಿದ ಅವರು ಪ್ರಸ್ತುತ ರೈತರು ತಾವು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರೆಯದೆ, ಬೆಳೆ ಬೆಳೆಯಲು ಮಾಡಿದ್ದ ಸಾಲವನ್ನು ತೀರಿಸಲಾಗದೇ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ನಮ್ಮ ಕಣ  , ಮುಂದಿದೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ರೀತಿಯಲ್ಲಿ ಪ್ರೋತ್ಸಾಹಧನ ನೀಡುವ ಮೂಲಕ ಅವರಿಗೆ ನೆರವಾಗುವುದಾಗಿ ತಿಳಿಸಿದ್ದಾರೆ.
ಸಿ.ಬಿ.ಸುರೇಶ್ ಬಾಬು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಬಡವ ಬಲ್ಲಿದರಿಗೆ ಸದಾ ಸ್ಪಂದಿಸುತ್ತಾ ಬಂದಿದ್ದು, ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹೊಂದಿದವರಾಗಿದ್ದಾರೆ. ಇವರ ತಂದೆ ಬಸವಯ್ಯ ಸಚಿವರಾಗಿದ್ದು ಹೊರತು ಪಡಿಸಿದರೆ ಇತ್ತೀಚಿನವರೆಗೆ ಚಿ.ನಾ.ಹಳ್ಳಿಯವರಿಗೆ ಸಚಿವ ಸ್ಥಾನ ದೊರೆಯದಿರುವುದು ದುರಂತ. ಈ ಬಾರಿ ಚುನಾವಣೆಯಲ್ಲಿ  ಸುರೇಶ್‌ಬಾಬು  ಗೆಲ್ಲಿಸಿದಲ್ಲಿ ಜೆಡಿಎಸ್‌ನಿಂದ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ತಿಳಿಸಿದರು.
ಇನ್ನೊಮ್ಮೆ ಮತ ನೀಡಿ:  ಚಿ.ನಾ.ಹಳ್ಳಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಶಾಸಕ ಸಿ.ಬಿ.ಸುರೇಶ್‌ಬಾಬು ತಮ್ಮ ಸಾಧನೆಯ ಬಗ್ಗೆ ವಿವರಿಸಿ ಕ್ಷೇತ್ರದ ಅಭಿವೃದ್ಧಿಗಾಗಿ ಮತ್ತೊಂದು ಬಾರಿ ಚುನಾಯಿಸಬೇಕೆಂದು ಕೋರಿದರು.  ಹಿರಿಯೂರು ಕ್ಷೇತ್ರದ ಅಭ್ಯರ್ಥಿ ಎ.ಕೃಷ  , ಪ್ಪ ಮಾತನಾಡಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಹುಲಿನಾಯ್ಕರ್, ಜಿ.ಪಂ.ಸದಸ್ಯೆಯರಾದ ಮಂಜುಳಾ, ಜಾನಮ್ಮ, ಮುಖಂಡರಾದ ಮಹದೇವಪ್ಪ, ರಾಮಹಾಲ್‌ನ ಬಾಲೇಶ್,ತಿಮ್ಮಯ್ಯ, ನಂದಿಹಳ್ಳಿ ಶಿವಣ  , , ವಕೀಲ ಸದಾಶಿವಯ್ಯ, ಮೋಹನ್, ಬುಕ್ಕಾಪಟ್ಟಣ ಜಯಪ್ರಕಾಶ್, ರೇವಣ  ,  ಒಡೆಯರ್ ಸೇರಿದಂತೆ ಅಪಾರ ಸಂಖ್ಯೆಯ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement