ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿರುವೆ

Vishwanath S
Updated On : 23 Apr 2013, 12:40 pm

ಕ.ಪ್ರ. ವಾರ್ತೆ  , ಕುಣಿಗಲ್  ,  ಏ.22
ವಿರೋಧಪಕ್ಷದ ಶಾಸಕನಾಗಿದ್ದು, ಆಡಳಿತ ಪಕ್ಷವಾದ ಬಿಜೆಪಿ ಸರ್ಕಾರದ ಸತತ ಅಸಹಕಾರದ ಹೊರತಾಗಿ, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿರುವುದಾಗಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ತಿಳಿಸಿದರು.
ಸೋಮವಾರ, ತಾಲೂಕಿನ ಗಿಡದಪಾಳ್ಯಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಕ್ಷೇತ್ರದ ಕೈಪಾಳೆಯದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ, ಗಿಡದಪಾಳ್ಯ ಗ್ರಾಮದ ಮನೆ, ಮನೆಗೂ ಭೇಟಿ ನೀಡಿ ಮತಯಾಚನೆ ಮಾಡಿದ ಅವರು, ತಾಲೂಕಿನಲ್ಲಿ ಸಮಗ್ರ ನೀರಾವರಿ ಕಲ್ಪಿಸುವ ಯೋಜನೆಗೆ ಅವಕಾಶ ಇದ್ದರೂ, ಈ ಹಿಂದೆ ಶಾಸಕರಾಗಿದ್ದವರು, ಸಮರ್ಪಕ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿದ್ದಾರೆ.  ಈ ಸಂದರ್ಭದಲ್ಲಿ, ತಾವು ಶಾಸಕರಾಗಿ ಆಯ್ಕೆಯಾಗಿ, ಸತತ ಹೋರಾಟದ ನಡುವೆ ತಾಲೂಕಿನಲ್ಲಿ 22 ಕಿಮಿ ಹೇಮಾವತಿ ನಾಲಾ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಂಡು, ಉಳಿದ ಕಾಮಗಾರಿಗೆ ಸೂಕ್ತ ಟೆಂಡರ್ ಪ್ರಕ್ರಿಯೆ ಮುಗಿಸಲಾಗಿದೆ ಎಂದರು.
ನೆಮ್ಮದಿ ತಂದಿದೆ: ಯಡೆಯೂರು ದೇವಾಲಯ ಹಸ್ತಾಂತರ ವಿಷಯದಲ್ಲಿ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದ ಕಾರಣ, ಹಲವು ವೈರುದ್ಯದ ಸನ್ನಿವೇಶ ಎದುರಿಸಿ, ಎಂತಹ ಆಮಿಷಗಳು ಬಂದರೂ ಜಗ್ಗದೆ, ದೇವಾಲಯ ಸರ್ಕಾರದ ವಶದಲ್ಲೆ ಮುಂದುವರೆಯುವಂತೆ, ಇತಿಹಾಸ ಪ್ರಸಿದ್ಧ ಕುದುರೆಫಾರಂ ಸಂರಕ್ಷಣೆ ಮಾಡಿರುವುದು ನನಗೆ ನೆಮ್ಮದಿ ತಂದಿದೆ ಎಂದರು.   ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಿನಿವಿಧಾನಸೌಧ, ತಾಲೂಕಿನ ವಿವಿಧ ಕೆರೆಗಳ ಸಮಗ್ರ ಅಭಿವೃದ್ಧಿ  ಕಾಮಗಾರಿಗೆ ಚಾಲನೆ ನೀಡಲಾಗಿದೆ.  ನನ್ನ ಅಧಿಕಾರವಧಿಯಲ್ಲಿ ತಾವು ಮಾಡಿರುವ ದ್ವೇಷರಹಿತ, ಅಭಿವೃದ್ಧಿ ಪರ ರಾಜಕಾರಣ, ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳು, ಸ್ಥಿರ ಸರ್ಕಾರದ ಘೋಷಣೆಗೆ ಪೂರಕವಾಗಿ ಈ ಬಾರಿ ಕಾಂಗ್ರೆಸ್‌ನ ಗೆಲುವಿಗೆ ಸಹಕಾರಿಯಾಗಲಿದೆ ಎಂದರಲ್ಲದೆ, ಮಾಜಿ ಶಾಸಕ ಎಸ್.ಪಿ. ಮುದ್ದುಹನುಮೇಗೌಡ ತಟಸ್ಥರಾಗಿ ಉಳಿದಿರುವ ಕಾರಣ, ಅವರ ಬೆಂಬಲಿಗರು ತಮಗೆ ಸಹಕರಿಸಿಲಿದ್ದಾರೆಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್, ಕೊತ್ತಗೆರೆ ಗ್ರಾಪಂ ಅಧ್ಯಕ್ಷ ಚಂದ್ರೇಗೌಡ, ಮುಖಂಡರಾದ ನಾಗರಾಜು, ಬಿ.ಡಿ.ಕುಮಾರ್, ಶ್ರೀನಿವಾಸ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement